ಕುಂಬಳೆ: ಅನಧಿಕೃತ ಹೊಯ್ಗೆ ಸಂಗ್ರಹ, ಸಾಗಾಟದ ವಿರುದ್ಧ ಕುಂಳೆ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ನಿನ್ನೆ ಎರಡು ಕಡೆಗಳಲ್ಲಿ ನಡೆಸಿದ ದಾಳಿಯಲ್ಲಿ ಪೊಲೀಸರು ಎರಡು ಅನಧಿಕೃತ ಕಡವುಗಳನ್ನು ಹಾಗೂ ಹೊಯ್ಗೆ ಸಂಗ್ರಹಕ್ಕೆ ಬಳಸಿದ ಮೂರು ದೋಣಿಗಳನ್ನು ಜೆಸಿಬಿ ಬಳಸಿ ನಾಶಗೊಳಿಸಿದ್ದಾರೆ.
ಮೊಗ್ರಾಲ್ ಕೆಕೆ ಪುರದಲ್ಲಿ ನಿನ್ನೆ ಸಂಜೆ ನಡೆಸಿದ ಕಾರ್ಯಾಚರಣೆ ವೇಳೆ ಕಾಂಡ್ಲಾ ಕಾಡುಗಳ ಮಧ್ಯೆ ಬಚ್ಚಿಟ್ಟ ಸ್ಥಿತಿಯಲ್ಲಿ ಎರಡು ದೋಣಿಗಳು ಪತ್ತೆಯಾಗಿವೆ. ಅವುಗಳನ್ನು ದಡಕ್ಕೆ ತಲುಪಿಸಿ ಜೆಸಿಬಿಯಿಂದ ನಾಶಗೊಳಿ ಸಲಾಗಿದೆ. ಅಲ್ಲದೆ ಅಲ್ಲಿನ ಅನಧಿಕೃತ ಕಡವನ್ನು ಕೂಡಾ ಸಮತಟ್ಟುಗೊಳಿ ಸಲಾಯಿತು. ಅದೇ ರೀತಿ ಶಿರಿಯ ಹೊಳೆಯ ಪಾಚಾಣಿ ಎಂಬಲ್ಲಿ ಒಂದು ದೋಣಿ ಹಾಗೂ ಅನಧಿಕೃತ ಕಡವನ್ನು ಜೆಸಿಬಿ ಬಳಸಿ ನಾಶಗೊಳಿಸಲಾಗಿದೆ. ಹೊಯ್ಗೆ ಸಾಗಾಟಕ್ಕೆ ವಾಹನಗಳಿಗೆ ರಸ್ತೆ ಸೌಕರ್ಯ ಒದಗಿಸುವ ಸ್ಥಳದ ಮಾಲಕರ ವಿರುದ್ಧ ಕೇಸು ದಾಖಲಿ ಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಎಸ್ಐ ಕೆ.ಪಿ ಗಣೇಶನ್, ಎಎಸ್ಐ ಅತುಲ್ರಾಮ್, ಸಿವಿಲ್ ಪೊಲೀಸ್ ಆಫೀಸರ್ಗಳಾದ ಸುಧೀಶ್, ಹರೀಂದ್ರನ್ ಎಂಬಿವರು ಕಾರ್ಯಾ ಚರಣೆ ತಂಡದಲ್ಲಿದ್ದರು.






