ಕೇರಳದಲ್ಲಿ ಅಕ್ರಮವಾಗಿ ಠಿಕಾಣಿ ಹೂಡಿದ ಬಾಂಗ್ಲಾದೇಶೀಯರು: ಕೇಂದ್ರ ತನಿಖಾ ತಂಡದಿಂದ ಕಾಸರಗೋಡಿನಲ್ಲೂ ತನಿಖೆ

ಕಾಸರಗೋಡು:  ಬಾಂಗ್ಲಾ ದೇಶದಿಂದ ಅಕ್ರಮವಾಗಿ ಭಾರತದೊ ಳಗೆ ನುಸುಳಿ ದೇಶದ ವಿವಿಧ ರಾಜ್ಯ ಗಳಲ್ಲಿ ಅಕ್ರಮವಾಗಿ ನೆಲೆಯೂರ ತೊಡಗಿರುವ ಬಾಂಗ್ಲಾ ದೇಶಿಯರು ಈಗ ಕೇರಳಕ್ಕೂ ಪ್ರವೇಶಿಸಿ ಭಾರೀ ಸಂಖ್ಯೆಯಲ್ಲಿ ನೆಲೆಯೂರತೊಡಗಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಕೇಂದ್ರ ಗುಪ್ತಚರ ವಿಭಾಗಕ್ಕೆ ಲಭಿಸಿದೆ. ಇದರಂತೆ ಅದರ ತನಿಖೆಯನ್ನು ಕಾಸರಗೋಡಿಗೂ ವಿಸ್ತರಿಸಲಾಗಿದೆ.

ಭಾರತದ ಗಡಿ ಪ್ರದೇಶಗಳಲ್ಲಿ ನೆಲೆಸಿರುವ ಅಕ್ರಮ ವಿದೇಶಿ ವಲಸಿಗರನ್ನು ಪತ್ತೆಹಚ್ಚಲು  ಕೇಂದ್ರ ಚುನಾವಣಾ ಆಯೋಗ ಎಸ್‌ಐಆರ್ ಕ್ರಮ ಆರಂಭಿಸಿದ್ದು, ಇದರಿಂದಾಗಿ ಅಂತಹ ರಾಜ್ಯಗಳಲ್ಲಿ ಅಕ್ರಮವಾಗಿ  ನೆಲೆಸಿರುವ ಬಾಂಗ್ಲಾದೇಶದವರು  ಹೆದರಿ ಅಲ್ಲಿಂದ ದಕ್ಷಿಣ ಭಾರತ ಅದರಲ್ಲೂ  ವಿಶೇಷವಾಗಿ ಕೇರಳಕ್ಕೆ ಆಗಮಿಸಿ ತಾವು ಪಶ್ಚಿಮ ಬಂಗಾಳದವರಾಗಿದ್ದಾರೆಂದು ನಂಬಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಠಿಕಾಣಿ ಹೂಡಿದ್ದ ಬಾಂಗ್ಲಾ ದೇಶದ ಯುವತಿಯರನ್ನು ಪೊಲೀಸರು ಕಣ್ಣೂರಿನಿಂದ ಕಳೆದ ಎgಡು ದಿನಗಳಲ್ಲಾಗಿ ಬಂಧಿಸಿದ್ದರು. ಮಾತ್ರವಲ್ಲ ಕೊಟ್ಟಾರಕರೆಯಿಂದಲೂ 10 ಬಾಂಗ್ಲಾ ದೇಶಿಯರನ್ನು ಪೊಲೀಸರು ದಿನಗಳ ಹಿಂದೆ ಸೆರೆಹಿಡಿದ್ದಾರೆ. ಇವರು ಕೇರಳದ  ವಿಳಾಸದಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಚುನಾವಣಾ ಗುರುತುಚೀಟಿಗಳನ್ನು ಹೊಂದಿರುವುದನ್ನು ಪತ್ತೆಹಚ್ಚಲಾಗಿದೆ. ಹೀಗೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸುವ ಬಾಂಗ್ಲಾ ದೇಶದವರಿಗೆ ಅಗತ್ಯದ ನಕಲಿ ದಾಖಲುಪತ್ರಗಳನ್ನು ಸೃಷ್ಟಿಸಿಕೊಡುವ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವ  ಮಾಫಿಯಾತಂಡವೊಂದು ಬೆಂಗಳೂರು ಕೇಂದ್ರೀಕರಿಸಿ ಕಾರ್ಯವೆಸುತ್ತಿರುವ ಬಗ್ಗೆ ಕೇಂದ್ರ ಗುಪ್ತಚರ ವಿಭಾಗಕ್ಕೆ ಮಾಹಿತಿ ಲಭಿಸಿದೆ. ಕಳೆದ ಎgಡು ದಿನಗಳಲ್ಲಾಗಿ ಕಣ್ಣೂರಿನಿಂದ ಸೆರೆಗೊಳಗಾದ ಬಾಂಗ್ಲಾ ದೇಶದ ಐವರು ಯುವತಿಯರು  ತಾವು ಪಶ್ಚಿಮ ಬಂಗಾಲದವರೆಂಬ ಹೆಸರಲ್ಲಿ  ಅಲ್ಲಿಗೆ ಆಗಮಿಸಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಿ ಅಲ್ಲೇ  ತಂಗಿದ್ದರ. ನಮ್ಮಂತೆ ಬಾಂಗ್ಲಾದೇಶದ ಇತರ ಹಲವರು   ಆಗಮಿಸಿ ಕೇರಳದ ವಿವಿಧ ಜಿಲ್ಲೆಗಳಲ್ಲಿ ಠಿಕಾಣಿ ಹೂಡಿದ್ದಾರೆಂದೂ ಬಂಧಿತರಾದ  ಆ ಯುವತಿಯರ ವಿಚಾರಣೆ ವೇಳೆ ಪೊಲೀಸರಲ್ಲಿ ಬಾಯಿಬಿಟ್ಟಿದ್ದಾರೆ. ಆದ್ದರಿಂದ ಅಂತಹ ತಂಡ ಕಾಸರಗೋಡು ಜಿಲ್ಲೆಗೂ ಪ್ರವೇಶಿಸಿ  ಇಲ್ಲಿ ಠಿಕಾಣಿ ಹೂಡಿದರೆಂಬ ಹಿನ್ನೆಲೆಯಲ್ಲಿ ಅದರ ತನಿಖೆಯನ್ನು ಕೇಂದ್ರ ಗುಪ್ತಚರ ವಿಭಾಗ ಕಾಸರಗೋಡಿಗೂ ವಿಸ್ತರಿಸಿದೆ.

ಹೀಗೆ ದೇಶದಲ್ಲಿರುವ ವಿದೇಶಿಯರುಹಾಗೂ ಅಕ್ರಮ ನುಸುಳುಗಾರರ ಮೇಲೆ ನಿಗಾ ಇರಿಸಲು ಕೇಂದ್ರ  ಗುಪ್ತಚರ ವಿಭಾಗ ಫಾರಿನ್ ಸೆಲ್ ಎಂಬ ಹೆಸರಲ್ಲಿ ವಿಶೇಷ ಸೆಲ್‌ಗೆ ರೂಪು ನೀಡಿದ್ದು ಆ ಮೂಲಕ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ.

ಹೀಗೆ  ಕೇರಳ ಹಾಗೂ ದೇಶದ ಇತರ ರಾಜ್ಯಗಳಲ್ಲಿ ಅಕ್ರಮವಾಗಿ ನುಸುಳಿರುವವರು ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಉಗ್ರಗಾಮಿ ಸಂಘಟನೆಗಳು ಹಾಗೂ ಮಾದಕದ್ರವ್ಯ ಪೂರೈಕೆ ತಂಡಗಳೊಂದಿಗೆ ನಂಟು ಹೊಂದಿರುವ ಶಂಕೆಯನ್ನು ಗುಪ್ತಚರ ವಿಭಾಗ ಸ್ಪಷ್ಟಪಡಿಸಿದೆ.  ಇದು ದೇಶದ ಭದ್ರತೆಗೆ ತೀವ್ರ ಗಂಡಾಂತರವಾಗಲಿದೆಯೆಂದು ಹೇಳಿದೆ.

You cannot copy contents of this page