ಉಪ್ಪಳ: ಮಂಗಲ್ಪಾಡಿ ಪಂಚಾ ಯತ್‌ನ ವಿವಿಧ ವಾರ್ಡ್ಗಳಲ್ಲಿರುವ ಸರಕಾರಿ ಬಾವಿಯನ್ನು ಅಭಿವೃದ್ದಿ ಗೊಳಿಸಲು ಕ್ರಮಕೈಗೊಳ್ಳಲಾಗಿದೆ. ವಿವಿಧೆಡೆ ಬಾವಿಗಳು ಶೋಚನೀಯÁ ವಸ್ಥೆಯಲ್ಲಿದ್ದು, ಸ್ಥಳೀಯರಿಗೆ ನೀರು ಉಪಯೋಗಿಸಲು ಸಾಧ್ಯವಾಗದ ಸ್ಥಿತಿ ಯಲ್ಲಿತ್ತು. ಈಗಾಗಲೇ ಪುಳಿಕುತ್ತಿ, ಪ್ರತಾಪನಗರ ಸಹಿತ ಹಲವಾರು ವಾರ್ಡ್ಗಳಲ್ಲಿ ಬಾವಿಗಳ ಅಭಿವೃದ್ದಿ ಕಾರ್ಯಗಳು ನಡೆದಿವೆ. ಬಾವಿಯ ಸುತ್ತುಗೋಡೆ, ನೆಲಕ್ಕೆ ಸಾರಣೆ, ಮೇಲ್ಭಾಗಕ್ಕೆ ಕಬ್ಬಿಣದ ಜಾಲಿಯನ್ನು ಅಳವಡಿಸಿ ನವೀಕರಿಸಲಾಗಿದೆ. ಪುಳಿಕುತ್ತಿ ಐಲ ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನದ ಪರಿಸರ ದಲ್ಲಿರುವ ಬಾವಿಯ ಶೋಚನೀ ಯÁವಸ್ಥೆಯ ಬಗ್ಗೆ ಕಾರವಲ್ 2024 ಮಾರ್ಚ್ನಲ್ಲಿ ಫೊಟೋ ಸಹಿತ ವರದಿ ಪ್ರಕಟಿಸಲಾಗಿತ್ತು. ಪಂಚಾಯತ್‌ನ ನೂತನ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್ ಮಂಗಲ್ಪಾಡಿಯನ್ನು ಅಭಿ ವೃದ್ದಿಗೊಳಿಸಿ ವಿವಿಧ ಸೌಲಭ್ಯಗಳೊಂ ದಿಗೆ ಉನ್ನತ ಮಟ್ಟಕ್ಕೆ ಏರಿಸಲು ಪ್ರಯತ್ನಿಸುತ್ತಿದ್ದಾರೆ. ಬಾವಿಯನ್ನು ನವೀಕರಿಸಿದ ಈ ಕಾರ್ಯವನ್ನು ಊರವರು ಶ್ಲಾಘಿಸಿದ್ದಾರೆ.







