ಬೇಳ: ಬೇಳ ಪಬ್ಲಿಕ್ ವೆಲ್ಫೇರ್ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸಂಘದ ಕುಂಬಳೆ ಕಚೇರಿಯಲ್ಲಿ ಅಧ್ಯಕ್ಷ ನ್ಯಾಯವಾದಿ ಥೋಮಸ್ ಡಿ’ಸೋಜರವರ ಅಧ್ಯಕ್ಷತೆಯಲ್ಲಿ ಜರಗಿತು. ಕಾಸರಗೋಡು ಕಥೋಲಿಕ್ ವಲಯದ ಪ್ರಧಾನ ಧರ್ಮಗುರು ವಂ. ಹೆರಾಲ್ಡ್ ಮಸ್ಕರೇನಸ್ ಉದ್ಘಾಟಿಸಿ ಆಶೀರ್ವಚನ ನೀಡಿದರು. ಈ ವೇಳೆ ಸಂಘದ ಬೆಳವಣಿಗೆ ಮಹತ್ತರ ಕೊಡುಗೆ ನೀಡಿದ ಸಂಘದ ನಿಕಟಪೂರ್ವ ಅಧ್ಯಕ್ಷೆ ಜೀನ್ ಲವಿನಾ ಮೊಂತೆರೋ, ಮಾಜಿ ಉಪಾಧ್ಯಕ್ಷ ರಾಜು ಸ್ಟೀಫನ್ ಡಿ’ಸೋಜರನ್ನು ಗೌರವಿಸಲಾಯಿತು. ಕಾರ್ಯದರ್ಶಿ ಜಾಸ್ಮಿನ್ ಡಿ’ಸೋಜ, ನಿರ್ದೇಶಕ ಸ್ಟ್ಯಾನಿ ಲೋಬೊ ಮಾತನಾಡಿದರು. ಉಪಾಧ್ಯಕ್ಷ ರಿಚಾರ್ಡ್ ಕ್ರಾಸ್ತ ಸ್ವಾಗತಿಸಿ, ಥೋಮಸ್ ಡಿ’ಸೋಜ ವಂದಿಸಿದರು. ಜಯಶ್ರೀ ಮೊಂತೆರೋ ನಿರೂಪಿಸಿದರು.





