ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ನಿಲ್ಲಿಸದೆ ಪರಾರಿಯಾದ ಬೈಕ್ ವಶ: ಎಂಡಿಎಂಎ, ಗಾಂಜಾ, ತಲವಾರು ಸಹಿತ ಓರ್ವ ಬಂಧನ

ಕುಂಬಳೆ:  ಮಂಜೇಶ್ವರ ಅಬಕಾರಿ ಚೆಕ್ ಪೋಸ್ಟ್‌ನಲ್ಲಿ ಕೈ ತೋರಿಸಿದರೂ ನಿಲ್ಲಿಸದೆ ಪರಾರಿಯಾದ ಬುಲ್ಲೆಟ್ ಬೈಕ್‌ನ್ನು ಪೊಲೀಸರು ಹಾಗೂ ಅಬಕಾರಿ ತಂಡ  ಅತೀ ಸಾಹಸದಿಂದ  ತಡೆದು ನಿಲ್ಲಿಸಿ ಯುವಕನನ್ನು  ಬಂಧಿಸಿದ್ದಾರೆ. ಬೈಕ್‌ನಲ್ಲಿ 3.306 ಗ್ರಾಂ ಎಂಡಿಎಂಎ, 1.129 ಗ್ರಾಂ ಗಾಂಜಾ, ಚಾಕು, ತಲವಾರು ಮೊದಲಾದವುಗಳು ಪತ್ತೆಯಾಗಿವೆ.

ಈ ಸಂಬಂಧ ಉಪ್ಪಳ ಪತ್ವಾಡಿಯ ಕಲಂದರ್ ಮಂಜಿಲ್‌ನ ಅಬ್ದುಲ್ ರೌಫ್ ಎಂಬಾತನನ್ನು ಕುಂ ಬಳೆ ಸರ್ಕಲ್ ಇನ್‌ಸ್ಪೆಕ್ಟರ್ ಅನೂಪ್ ಕೃಷ್ಣ ಆರ್.ಪಿ ಅವರ ಸಹಾಯದೊಂದಿಗೆ ಎಕ್ಸೈಸ್ ಸರ್ಕಲ್ ಇನ್‌ಸ್ಪೆಕ್ಟರ್ ಜಿ. ಕೃಷ್ಣಕುಮಾರ್ ಹಾಗೂ ತಂಡ ಬಂಧಿಸಿದೆ. ನಿನ್ನೆ ರಾತ್ರಿ ೯.೪೫ರ ವೇಳೆ ಈ ಘಟನೆ ನಡೆದಿದೆ. ಸಿಐ ನೇತೃತ್ವದಲ್ಲಿ ಕುಂಬಳೆ ಎಕ್ಸೈಸ್ ರೇಂಜ್ ಅಧಿಕಾರಿಗಳು  ಮಂಜೇಶ್ವರ ಎಕ್ಸೈಸ್ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಬುಲ್ಲೆಟ್ ಬೈಕ್ ತಲುಪಿದೆ. ಅಧಿಕಾರಿಗಳು ಕೈ ತೋರಿಸಿ ದರೂ ನಿಲ್ಲಿಸದೆ   ಬೈಕ್ ಪರಾರಿಯಾ ಗಿದೆ. ಅದನ್ನು ಅಧಿಕಾರಿಗಳು ಬೆನ್ನಟ್ಟಿದ್ದು ಈ ವೇಳೆ ಉಪ್ಪಳ ರೈಲ್ವೇ ನಿಲ್ದಾಣ ಮೂಲಕ ಬಪ್ಪಾಯಿತೊಟ್ಟಿಗೆ ತೆರಳುವ ರಸ್ತೆ ಯಲ್ಲಿ ಸಂಚರಿಸಿದ ಬೈಕ್‌ನ್ನು ಸಮೀಪದ ಮೈದಾನದಲ್ಲಿ  ತಡೆದು ನಿಲ್ಲಿಸಲಾಗಿದೆ. ಈ ವೇಳೆ ಪೊಲೀಸರು ಅಲ್ಲಿಗೆ ತಲುಪಿದ್ದಾರೆ.  ಅಬಕಾರಿ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಜಿತಿನ್, ಸಜಿತ್, ಪ್ರಿವೆಂಟೀವ್ ಆಫೀಸರ್ ಮೊಯ್ದೀನ್ ಸಾಧಿಕ್, ನಿಶಾದ್ ಪಿ.ಎ, ರಮೇಶನ್, ಅನಿಲ್ ಕುಮಾರ್, ಚಾಲಕ ಪ್ರದೀಪನ್ ಎಂಬಿವರಿದ್ದರು.

RELATED NEWS

You cannot copy contents of this page