ಕಾಸರಗೋಡು: ಎಸ್‌ಎನ್‌ಡಿಪಿ ಕಾಸರಗೋಡು ಯೂನಿಯನ್‌ನ ಆಶ್ರ ಯದಲ್ಲಿ ಶ್ರೀ ನಾರಾಯಣ ಗುರುಗಳ 99ನೇ ಸಮಾಧಿ ದಿನಾಚರಣೆ ಕಾರ್ಯ ಕ್ರಮ ನಡೆಯಿತು. ಕಾಸರಗೋಡು ಯೂನಿಯನ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮವನ್ನು ಯೋಗಂ ಡೈರೆಕ್ಟರ್ ನ್ಯಾಯವಾದಿ ಪಿ.ಕೆ. ವಿಜಯನ್ ಉದ್ಘಾಟಿಸಿದರು. ಎಸ್‌ಎನ್‌ಡಿಪಿ ಯೂನಿಯನ್ ಸೆಕ್ರೆಟರಿ ಗಣೇಶ್ ಪಾರೆಕಟ್ಟೆ, ಉಪಾಧ್ಯಕ್ಷ ಎ.ಟಿ. ವಿಜಯನ್, ಮೋಹನನ್ ಮೀಪುಗುರಿ, ನಾಗೇಶ್ ಕುಂಬಳೆ, ಕೃಷ್ಣನ್ ಪಾರೆಕಟ್ಟೆ, ವಿಜಯನ್ ಮನ್ನಿಪ್ಪಾಡಿ, ಕೆ. ರಾಜೇಶ್ ಮಾತನಾಡಿದರು.






