ಬಾಣಂತಿಯ ಆರೈಕೆಗೆ ತಲುಪಿದ ಯುವತಿ ನಗ್ನ ದೃಶ್ಯ ಚಿತ್ರೀಕರಿಸಿ ಪ್ರಚಾರ: ಆರೋಪಿ ಸೆರೆ

ಕಾಸರಗೋಡು: ಬಾಣಂತಿಯ ಆರೈಕೆಗೆಂದು ತಲುಪಿ  ಯುವತಿಯ ನಗ್ನ ದೃಶ್ಯಗಳನ್ನು ಚಿತ್ರಿಸಿ ಪ್ರಚಾರಪಡಿಸಿರುವುದಾಗಿ ದೂರಲಾಗಿದೆ. ಘಟನೆಯಲ್ಲಿ ಕೇಸು ದಾಖಲಿಸಿದ ಕಾಸರಗೋಡು ನಗರ ಠಾಣೆ ಪೊಲೀಸರು ಆರೋಪಿಯಾದ 25ರ ಹರೆಯದ ಯುವತಿಯನ್ನು ಬಂಧಿಸಿದ್ದಾರೆ. ಕರ್ನಾಟಕ ನಿವಾಸಿಯಾದ ಸುಲೈಖ ರಾಸಿಯ ಸೆರೆಯಾದ ಯುವತಿ. ಕಾಸರಗೋಡು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 27ರ ಹರೆಯದ ಯುವತಿ ದೂರುದಾರೆಯಾಗಿದ್ದಾರೆ.

ಯುವತಿಯ ಹೆರಿಗೆ ಆರೈಕೆಗಾಗಿ ಸುಲೈಖ ತಲುಪಿದ್ದಳು. ಈ ತಿಂಗಳ 7ರಿಂದ 20ರ ಮಧ್ಯೆಗಿನ ದಿನಗಳಲ್ಲಿ ಆರೈಕೆಯ ಮರೆಯಲ್ಲಿ ಯುವತಿಯ ದೃಶ್ಯಗಳನ್ನು ರಹಸ್ಯ ಕ್ಯಾಮರಾದಲ್ಲಿ ಸೆರೆ ಹಿಡಿದು ಹಲವರಿಗೆ ವಾಟ್ಸಪ್ ಮೂಲಕ ಕಳುಹಿಸಿಕೊಟ್ಟಿರುವುದಾಗಿ ದೂರಲಾಗಿದೆ. ಆರೋಪಿಯ ಮೊಬೈಲ್ ಫೋನ್‌ನ್ನು ದೂರುದಾರೆಯಾದ ಯುವತಿ ಅನಿರೀಕ್ಷಿತವಾಗಿ  ನೋಡಿದಾಗ ವೀಡಿಯೋಗಳು, ಫೊಟೋಗಳು ಚಿತ್ರೀಕರಿಸಿರುವ ಹಾಗೂ ಪ್ರಚಾರ ಪಡಿಸಿದ ವಿಷಯ ತಿಳಿದು ಬಂದಿದೆ. ಬಳಿಕ ಯುವತಿ ಮನೆಯವರಿಗೆ ಮಾಹಿತಿ ನೀಡಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಯ ಪತಿಯೊಂದಿಗೆ ಸೇರಿ ಬ್ಲ್ಯಾಕ್‌ಮೇಲ್ ನಡೆಸುವುದು ಯುವ ತಿಯ ಯೋಜನೆಯಾಗಿತ್ತೆಂದು ಶಂಕಿಸಲಾಗಿದೆ. ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

RELATED NEWS

You cannot copy contents of this page