ಕುಂಬಳೆ: ಕೆಲಕ್ಕೆಂದು ತಿಳಿಸಿ ಮನೆಯಿಂದ ಹೋದ ಯುವಕ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಎಡನಾಡು ಸಹಕಾರಿ ಬ್ಯಾಂಕ್ ಸಮೀಪದ ನಿವಾಸಿ ಕೆಂಬಯ್ಯ ಎಂಬವರ ಪುತ್ರ ಸಂತೋಷ್ ಎ.ಕೆ (38) ನಾಪತ್ತೆಯಾದ ಯುವಕ. ಈ ಬಗ್ಗೆ ಇವರ ಸಹೋದರಿ ನಂಜಮ್ಮ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಕಳೆದ ಜೂನ್ 13ರಂದು ಬೆಳಿಗ್ಗೆ 7 ಗಂಟೆಗೆ ಮಂಗಳೂರು ತೊಕ್ಕೋಟ್‌ನಲ್ಲಿ ಕೆಲಸಕ್ಕೆಂದು ತಿಳಿಸಿ ಸಂತೋಷ್ ತೆರಳಿದ್ದರು. ಆದರೆ ಅವರು ಇದು ವರೆಗೆ ಮರಳಿ ಬಂದಿಲ್ಲವೆಂದೂ ಅಲ್ಲದೆ ಅವರ ಬಗ್ಗೆ ಯಾವುದೇ ಮಾಹಿತಿಯಿಲ್ಲವೆಂದು ದೂರಲಾಗಿದೆ.






