ಕಾಸರಗೋಡು: ಪೊಲೀಸರು ನಿನ್ನೆ ನಡೆಸಿದ ಕ್ಷಿಪ್ರ ಕಾರ್ಯಾಚರ ಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 79 ಗ್ರಾಂ ಎಂಡಿಎಂಎ ಸಹಿತ ಮೂವ ರನ್ನು ಬಂಧಿಸಲಾಗಿದೆ.
ಮಡಿಕೇರಿ ನಿವಾಸಿಯೂ, ಪ್ರಸುತ್ತ ಪುತ್ತಿಗೆ ಕಟ್ಟತ್ತಡ್ಕದಲ್ಲಿ ವಾಸಿಸುವ ಶರೀಫ್, ಪುತ್ತಿಗೆಯ ಅಬ್ದುಲ್ ಶಹೀರ್, ಕುಂಬಳೆ ದಂಡೆಗೋಳಿಯ ಮುಹಮ್ಮದ್ ನಾಸರ್ ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ರಾಜಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಕೋಳಿಚ್ಚಾಲ್ನಿಂದ ಇವರನ್ನು ಸೆರೆಹಿಡಿಯಲಾಗಿದೆ. ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಯ ಅಧೀನದಲ್ಲಿರುವ ಡಾನ್ಸಾಪ್ ಟೀಂ ಹಾಗೂ ರಾಜಪುರಂ ಪೊಲೀಸರು ಸಂಯುಕ್ತ ಕಾರ್ಯಾಚರಣೆ ನಡೆಸಿದಾಗ ಮಾದಕವಸ್ತು ಸಾಗಾಟ ತಂಡ ಸೆರೆಗೀಡಾಗಿದೆ. ಇವರಿಂದ ಲಭಿಸಿದ ಮಾಹಿತಿಯ ಆಧಾರದಲ್ಲಿ ಕಲ್ಲಿಕೋಟೆಯಲ್ಲಿ ನಡೆಸಿದ ದಾಳಿಯಲ್ಲಿ 160 ಗ್ರಾಂ ಎಂಡಿಎಂಎ ಸಹಿತ ನವಾಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ತನಿಖೆ ಮುಂದುವರಿಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.






