ಕಾಸರಗೋಡು: ವ್ಯತ್ಯಸ್ಥ ದೂರುಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಪೊಲೀಸರು ಮೂರು ಪೋಕ್ಸೋ ಪ್ರಕರಣಗಳನ್ನು ದಾಖಲಿಸಿಕೊಂ ಡಿದ್ದಾರೆ. 11ರ ಹರೆಯದ ಬಾಲಕಿಯ ದೂರಿನಂತೆ ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯಲ್ಲಿ ಒಂದು ಕೇಸು ದಾಖಲಿಸ ಲಾಗಿದೆ. ಇದರಲ್ಲಿ ಮುಹಮ್ಮದ್ ಎಂಬಾತ ಆರೋಪಿಯಾಗಿದ್ದಾನೆ. ಶಾಲೆಗೆ ಹೋಗುತ್ತಿದ್ದ ವೇಳೆ ಆಟೋ ಚಾಲಕನಾದ ಮುಹಮ್ಮದ್ ದೈಹಿಕ ವಾಗಿ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. 11ರ ಹರೆಯದ ಇನ್ನೋರ್ವ ಬಾಲಕಿ ನೀಡಿದ ಇದೇ ರೀತಿಯ ದೂರಿನಂತೆ ಈತನ ವಿರುದ್ಧ ಬದಿಯಡ್ಕ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ. 15ರ ಹರೆಯದ ಬಾಲಕಿ ನೀಡಿದ ಇನ್ನೊಂದು ದೂರಿನಂತೆ ಆಟೋ ಚಾಲಕ ಶೈಜು ಎಂಬಾತನ ವಿರುದ್ಧ ವೆಳ್ಳರಿಕುಂಡ್ ಪೊಲೀಸರು ಪೋಕ್ಸೋ ಕೇಸು ದಾಖಲಿಸಿದ್ದಾರೆ. ಶಾಲೆಗೆ ಆಟೋದಲ್ಲಿ ತೆರಳುತ್ತಿದ್ದಾಗ ಬಿಗಿದಪ್ಪಿ ದೈಹಿಕವಾಗಿ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಮೂರು ಪ್ರಕರಣದಲ್ಲೂ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.






