ಕೋಳಿ ಅಂಕ : ಮೂವರ ಸೆರೆ, ಎರಡು ಕೋಳಿಗಳ ವಶ

ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಪುತ್ತಿಗೆ ಬಾಡೂರಿನ  ಆಮಿನ ಎಂಬಲ್ಲಿ ಕೋಳಿ ಅಂಕದಲ್ಲಿ ನಿರತವಾಗಿದ್ದ ತಂಡವನ್ನು ಬಂಧಿಸಲಾಗಿದೆ. ಬಾಡೂರುಪದವಿನ ಸತೀಶ (40), ಅಂಗಡಿಮೊಗರು ಆಮಿನ ಹೌಸ್‌ನ ಎ. ಚಂದ್ರ (47), ಕುರುಡಪದವು ಕೊಮ್ಮಂಗಳದ ಗಣೇಶ್ (35) ಎಂಬಿವರನ್ನು ಕುಂಬಳೆ ಎಸ್‌ಐ ಎನ್. ಅನೂಪ್ ನೇತೃತ್ವದಲ್ಲಿ ಬಂಧಿಸಲಾಗಿದೆ. ಸ್ಥಳದಿಂದ ಎರಡು ಕೋಳಿಗಳನ್ನು ವಶಪಡಿಸಲಾಗಿದೆ. ಹಿತ್ತಿಲಲ್ಲಿ ಕೋಳಿ ಅಂಕ ನಡೆಯುವ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಎಸ್‌ಐ ನೇತೃತ್ವದಲ್ಲಿ ನಿನ್ನೆ ಸಂಜೆ 6 ಗಂಟೆಗೆ ಪೊಲೀಸರು ಅಲ್ಲಿಗೆ ದಾಳಿ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ತಂಡ ಓಡಿ ಪರಾರಿಯಾಗಿದೆ. ಪೊಲೀಸ್ ತಂಡದಲ್ಲಿ ಎಎಸ್‌ಐ ಅತುಲ್‌ರಾಂ ಮೊದಲಾದವರಿದ್ದರು.

RELATED NEWS

You cannot copy contents of this page