ಕಾಸರಗೋಡು: ಬಿಜೆಪಿ ರಾಷ್ಟ್ರೀಯ ನಿರ್ವಾಹಕ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ಹಾಗೂ ಬಿಜೆಪಿ ರಾಜ್ಯ ಕಚೇರಿಯಾದ ಮಾರಾರ್ಜಿ ಭವನ್ನ ಮೇಲೆ ನಡೆದ ದಾಳಿಯನ್ನು ಪ್ರತಿಭಟಿಸಿ ಬಿಜೆಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡಿನಲ್ಲಿ ಇಂದು ಬೆಳಿಗ್ಗೆ ಬೃಹತ್ ಮೆರವಣಿಗೆ ನಡೆಸಲಾಯಿತು. ಪ್ರತಿಭಟನಾ ಮಾರ್ಚ್ನ್ನು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಉದ್ಘಾಟಿಸಿದರು. ಅವರು ಮಾತನಾಡಿ, ಗೌರವಾನ್ವಿತ ಉಪರಾಷ್ಟ್ರಪತಿ ಹಾಗೂ ಕೇಂದ್ರ ಗೃಹ ಸಚಿವರಿಗೆ ಕೂಡಾ ಸಂರಕ್ಷಣೆ ಖಚಿತಪಡಿಸಲು ಸಾಧ್ಯವಾಗದ ಗೃಹ ಖಾತೆ ಕೇರಳದ್ದಾಗಿದೆ ಎಂದು ಆರೋಪಿಸಿದರು. ಬಿಜೆಪಿ ನೇತಾರರು ಹಾಗೂ ಪಕ್ಷದ ಕಚೇರಿ ಮೇಲೆ ನಡೆಯುತ್ತಿರುವ ದಾಳಿ ರಾಜ್ಯದಲ್ಲಿ ಆಡಳಿತ ಪರಾಭವಗೊಂಡಿರುವುದನ್ನು ಮರೆಮಾಚಲು ನಡೆಸುವ ಪ್ರಯತ್ನವಾ ಗಿದೆ ಎಂದೂ ಅವರು ಆರೋಪಿಸಿದರು.
ಕಳೆದ ಮೂರು ತಿಂಗಳೊಳಗೆ ವಿ.ಡಿ. ಸತೀಶನ್ ಸರಕಾರ ಪರಾಭವಗೊಂಡಿದೆ ಎಂದು ಕೇರಳದ ಜನತೆ ತಿಳಿದುಕೊಂ ಡಿದ್ದಾರೆ. ಆಡಳಿತದ ಪರಾಭವವನ್ನು ಮರೆಮಾಚಲು ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಒಕ್ಕೂಟ ಎದುರಿಸುತ್ತಿರುವ ತಿರುಗೇಟು ಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಯೂತ್ ಕಾಂಗ್ರೆಸ್ ಹೆಸರಲ್ಲಿ ವ್ಯಾಪಕ ದಾಳಿ ನಡೆಸಲಾಗು ತ್ತಿದೆ. ಇದನ್ನು ಕೊನೆಗೊಳಿಸದಿದ್ದಲ್ಲಿ ತೀವ್ರ ತಿರುಗೇ ಟನ್ನು ಎದುರಿಸಬೇಕಾ ಗಿಬರಲಿದೆ ಯೆಂದು ಅಶ್ವಿನಿ ಮುನ್ನೆಚ್ಚರಿಕೆ ನೀಡಿ ದ್ದಾರೆ. ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಉಪಾಧ್ಯಕ್ಷ ಪಿ. ರಮೇಶ್, ಜಿಲ್ಲಾ ಕಾರ್ಯದರ್ಶಿಗಳಾದ ಪುಷ್ಪಾ ಗೋಪಾಲನ್, ಪ್ರಮಿಳಾ ಮಜಲ್, ಸಂಜೀವ ಪುಳ್ಕೂರು, ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ಎಸ್ಸಿ ಮೋರ್ಛಾ ರಾಜ್ಯ ಉಪಾಧ್ಯಕ್ಷ ಎ.ಕೆ.ಕಯ್ಯಾರ್ ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದರು.






