ಸೀತಾಂಗೋಳಿ: ಸೀತಾಂಗೋಳಿ-ಪೆರ್ಲ ರಸ್ತೆಯ ಮುಗು ರೋಡ್ನಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಯುವಕ ಮೃತಪಟ್ಟ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಮುಗು ಊಜಂಪದವಿನ ದಿ| ಮೊಯ್ದು ಎಂಬವರ ಪುತ್ರ ಎಂ.ಟಿ. ಮುಹಮ್ಮದ್ ಅಶ್ರಫ್ (೪೦) ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ವೇಳೆ ಈ ಅಪಘಾತ ಸಂಭವಿಸಿದೆ. ಪತ್ನಿ ಖೈರುನ್ನೀಸರನ್ನು ತಪಾಸಣೆ ನಡೆಸಲೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ದಂಪತಿ ಸಂಚರಿಸುತ್ತಿದ್ದ ಬೈಕ್ ಮುಗುರೋಡ್ಗೆ ತಲುಪಿದಾಗ ಅಪರಿಮಿತ ವೇಗದಲ್ಲಿ ಬಂದ ಕಾರು ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಮೊಹಮ್ಮದ್ ಅಶ್ರಫ್ ತಕ್ಷಣ ಮೃತಪಟ್ಟಿದ್ದಾರೆ. ಪತ್ನಿ ಖೈರುನ್ನೀಸ ಗಾಯಗೊಂಡಿದ್ದು ಅವರನ್ನು ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅಡುಗೆ ಕಾರ್ಮಿಕ ನಾಗಿದ್ದ ಮುಹಮ್ಮದ್ ಅಶ್ರಫ್ ನಾಡಿನಲ್ಲಿ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ,ಮಕ್ಕಳಾದ ಅಸ್ಫಾನ್, ಅಯಾನ್, ಬಾತುಲ್, ಸಹೋದರ-ಸಹೋದರಿಯರಾದ ಸಿದ್ದಿಕ್, ಕುಬ್ರ, ಉಮೈರ, ಸುಬೈರಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






