ಕಾಸರಗೋಡು: ದೇಹಕ್ಕೆ ಸೀಮೆ ಎಣ್ಣೆ ಸುರಿದು ಕಿಚ್ಚಿರಿಸಿ ಗಂಭೀರ ಸುಟ್ಟು ಗಾಯಗೊಂಡು ಚಿಕಿತ್ಸೆಂi ಲ್ಲಿದ್ದ ಯುವತಿ ಚಿಕಿತ್ಸೆ ಫಲಕಾರಿ ಯಾಗದೆ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ.
ಬೇಡಗಂ ತೋರ ನಿವಾಸಿ ದಿ| ನಾರಾಯಣನ್ ಎಂಬವರ ಪುತ್ರಿ ಹರಿಶ್ರೀ (40) ಸಾವನ್ನಪ್ಪಿದ ಯುವತಿ. ಇವರು ಕಳೆದ ಜುಲೈ 21ರಂದು ಮನೆಯ ಶೌಚಾಲಯದಲ್ಲಿ ದೇಹಕ್ಕೆ ಸೀಮೆ ಎಣ್ಣೆ ಸುರಿದು ಕಿಚ್ಚಿರಿಸಿ ಗಂಭೀರ ಸುಟ್ಟು ಗಾಯಗೊಂಡಿದ್ದರು. ನಂತರ ಅವರನ್ನು ಮೊದಲು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿ ಉನ್ನತ ಮಟ್ಟದ ಚಿಕಿತ್ಸೆಗಾಗಿ ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಗೂ ನಂತರ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾ ಗದೆ ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ.
ದಿನಗಳ ಹಿಂದೆ ಇವರನ್ನು ಪ್ಲಾಸ್ಟಿಕ್ ಸರ್ಜರಿಗೊಳಪಡಿಸ ಲಾಗಿತ್ತು. ಹರಿಶ್ರೀಯ ಚಿಕಿತ್ಸೆಗಾಗಿ ಊರವರು ಹಣ ಸಂಗ್ರಹಿಸಿ ನೀಡಿದ್ದರು.
ಮೃತರು ತಾಯಿ ಸರೋಜಿನಿ, ಪತಿ ವಿಜಯ್ (ಮಂಗಳೂರು), ಏಕ ಪುತ್ರ ಅಖಿಲೇಶ್, ಸಹೋದರರಾದ ಪ್ರದೀಪನ್, ಅನೀಶ್, ಹರೀಶ್ ಮತ್ತು ರತೀಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






