ಬದಿಯಡ್ಕ: ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್‌ನ ಮಹಾಸಭೆ ಮವ್ವಾರಿನಲ್ಲಿರುವ ಬ್ಯಾಂಕ್‌ನ ಪ್ರಧಾನ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಬ್ಯಾಂಕ್ ಅಧ್ಯಕ್ಷ ಎಂ.ಸAಜೀವ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಸದಸ್ಯರಿಗೆ ಶೇ.3 ಲಾಭಾಂಶವನ್ನು ಘೋಷಿಸಲಾಯಿತು. ಬ್ಯಾಂಕ್ ಕಾರ್ಯದರ್ಶಿ ಮಾಧವ ಶರ್ಮಾ ಕುರುಮುಜ್ಜಿ ವರದಿ ವಾಚಿಸಿದರು. ಸಹ ಕಾರ್ಯದರ್ಶಿ ಲೋಕೇಶ್ ರೈ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಎಂ.ಶ್ರೀಧರ ಭಟ್ ಸ್ವಾಗತಿಸಿದರು. ನಿರ್ದೇಶಕ ಹರಿನಾರಾಯಣ ಶಿರಂತ್ತಡ್ಕ ವಂದಿಸಿದರು. ನಾರಾಯಣ ಎಂ. ಪ್ರಾರ್ಥನೆ ಹಾಡಿದರು. ನಿರ್ದೇಶಕರಾದ ಜಯಪ್ರಕಾಶ್ ಶೆಟ್ಟಿ, ಡಾ. ವೇಣುಗೋಪಾಲ ಕೆ., ರಾಮಕೃಷ್ಣ ಭಟ್ ಮವ್ವಾರು, ಅಣ್ಣಪ್ಪ, ಜಯಂತಿ ರೈ, ಸವಿತಾ ಕೆ., ಜಯಂತಿ, ಸದಸ್ಯರು, ಸಿಬ್ಬಂದಿಗಳು ಭಾಗವಹಿಸಿದರು.






