ಗೂಡಂಗಡಿ, ಹೋಟೆಲ್‌ಗಳಲ್ಲಿ ಆಹಾರ ಭದ್ರತಾ ಇಲಾಖೆ ಅಧಿಕಾರಿಗಳಿಂದ ದಾಳಿ, ತಪಾಸಣೆ

ಕಾಸರಗೋಡು: ಉಪಯೋ ಗಿಸಿದ ಎಣ್ಣೆಯನ್ನೇ ಮತ್ತೆ ಮತ್ತೆ ಉಪಯೋಗಿಸುತ್ತಿರುವುದಾಗಿ ಲಭಿಸಿದ ದೂರಿನ ಹಿನ್ನೆಲೆಯಲ್ಲಿ ಕಾಸರಗೋಡು, ಕಾಞಂಗಾಡ್ ನಗರದ ಹಲವು ಹೋಟೆಲ್ ಹಾಗೂ ಗೂಡಂಗಡಿಗಳಿಗೆ ಆಹಾರ ಭದ್ರತಾ ಇಲಾಖೆ ದಾಳಿ ನಡೆಸಿ ತಪಾಸಣೆ ನಡೆಸಿದೆ. ತಪಾಸಣೆಯಲ್ಲಿ ೧೮೦ ಲೀಟರ್ ಉಪಯೋಗಿಸಿದ ಅಡುಗೆ ಎಣ್ಣೆಯನ್ನು ಪತ್ತೆಹಚ್ಚಲಾಗಿದೆ. ಇವುಗಳನ್ನು ನಾಶಪಡಿಸಲಾಯಿತು.  ಆಹಾರ ಭದ್ರತಾ ಮಾನದಂಡಗಳನ್ನು ಪಾಲಿಸದ ೨೧ ಸಂಸ್ಥೆಗಳಿಗೆ ದಂಡ ವಸೂಲು ಮಾಡಲಿಕ್ಕಿರುವ ನೋಟೀಸ್ ನೀಡಲಾಯಿತು.

ರಾಜ್ಯದೆಲ್ಲಡೆಯಾಗಿ ಆಹಾರ ಭದ್ರತಾ ಇಲಾಖೆ ಜ್ಯಾರಿಗೊಳಿಸುವ ಆಪರೇಶನ್ ‘ತೆಳಿಮ’ದ ಅಂಗವಾಗಿ ಜಿಲ್ಲೆಯಲ್ಲೂ ತಪಾಸಣೆ ನಡೆಸಲಾಗಿದೆ. ಉಪಯೋಗಿಸಿದ ಎಣ್ಣೆಯನ್ನು ಮತ್ತೆ ಆಹಾರ ತಯಾರಿಗೆ ಉಪಯೋಗಿಸು ವುದನ್ನು ತಡೆಯುವುದಕ್ಕೆ ತಪಾಸಣೆ ನಡೆಸಲಾಗಿದೆ. ಕಾಸರಗೋಡು ಆಹಾರ ಭದ್ರತಾ ಅಸಿಸ್ಟೆಂಟ್ ಕಮಿಶನರ್ ಎಸ್. ಸಂಗೀತ್‌ರ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿದೆ. ಈ ರೀತಿಯ ತಪಾಸಣೆ ಇನ್ನೂ ಕೂಡ ಮುಂದುವರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

You cannot copy contents of this page