ಮಂಜೇಶ್ವರ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮಂಜೇಶ್ವರ ಘಟಕದ ನೇತೃತ್ವದಲ್ಲಿ ಹೊಸಂಗಡಿ ರೈಲ್ವೆ ಮೇಲ್ಸೇತುವೆಯ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸುವಂತೆ ಆಗ್ರಹಿಸಿ ಮಂಜೇಶ್ವರ ಹೊಸಂಗಡಿ ರೈಲ್ವೆ ಸೇತುವೆ ಸಮೀಪ ಬೃಹತ್ ಪ್ರತಿಭಟನೆ ನಿನ್ನೆ ನಡೆಸಲಾಯಿತು. ನೇತಾರರಾದ ಎನ್.ಎ. ಅಬ್ದುಲ್ ಹಮೀದ್, ಸತ್ಯಜ್ಯೋತ್, ಹಸ್ಸೈನಾರ್, ಹನೀಫ್ ಪ್ರೊಸೋಟ್, ಅಬ್ಬು ಹಾಜಿ ಕಡಂಬಾರ್, ಗಾಯತ್ರಿ ಟೀಚರ್, ಇಸಾಕ್, ಹಮೀರ್, ಅಶ್ರಫ್, ಸಿದ್ದೀಕ್, ಮುಹ್ಸಿನ್, ಖಲೀಲ್, ಮೂಸ ನೇತೃತ್ವ ನೀಡಿದರು. ಈ ಸಂದರ್ಭ ಹೊಸಂಗಡಿ ರೈಲ್ವೆ ಮೇಲ್ಸೇತುವೆಯ ಕಾಮಗಾರಿಯನ್ನು ಶೀಘ್ರ ಆರಂಭಿಸುವಂತೆ ಒತ್ತಾಯಿಸಿ ಪಾಲಕ್ಕಾಡ್ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಸಲ್ಲಿಸಲು ಸಹಿ ಸಂಗ್ರಹ ಅಭಿಯಾನವನ್ನು ನಡೆಸಲಾಯಿತು. ಪ್ರತಿಭಟನೆಯಲ್ಲಿ ಆಟೋ ಚಾಲಕರು, ಸ್ಥಳೀಯರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡರು






