ರಕ್ತವಾಂತಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಿಹಾರದ ಯುವಕ ಸಾವು

 
ಕಾಸರಗೋಡು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ  ಯುವಕ ರಕ್ತವಾಂತಿಯಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಬಿಹಾರದ ನೌಸಾ ನಿವಾಸಿ ಮುಹಮ್ಮದ್ ಎಂಬವರ ಪುತ್ರ ಮುಹಮ್ಮದ್ ಶಹನ್‌ಬಾಚ್ (18) ಸಾವನ್ನಪ್ಪಿದ ಯುವಕ. ಈತ ನಿನ್ನೆ ತನ್ನ ಸ್ನೇಹಿತರ ಜೊತೆ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಂಗಳೂರಿನಿಂದ ತೃಶೂರಿಗೆ ಪ್ರಯಾಣಿಸುತ್ತಿದ್ದನು. ದಾರಿ ಮಧ್ಯೆ ಆತ ತೀವ್ರ ಅಸ್ವಸ್ತಕ್ಕೊಳಗಾಗಿ ರಕ್ತವಾಂತಿ ಮಾಡತೊಡಗಿ ಪ್ರಜ್ಞೆ ಕಳೆದುಕೊಂಡನು. ರೈಲು ಕಾಸರಗೋಡು ನಿಲ್ದಾಣಕ್ಕೆ ತಲುಪಿದಾಗ ರೈಲ್ವೇ ಭದ್ರತಾ ಪಡೆ ತಕ್ಷಣ ಜನರಲ್ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿರಿಸ ಲಾಯಿತು. ರೈಲ್ವೇ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಮೃತದೇ ಹವನ್ನು ಇಂದು ಮೃತನ ಊರಿಗೆ ಸಾಗಿಸುವ ಸಿದ್ಧತೆ ಆರಂಭಗೊಂಡಿದೆ.

You cannot copy contents of this page