ಮಂಜೇಶ್ವರ: ಮನೆಯಿಂದ ಹೊರಗೆ ತೆರಳಿದ ಯುವತಿ ಮರಳಿ ಬಂದಿಲ್ಲವೆಂದು ದೂರಲಾಗಿದೆ. ಕುಂಜತ್ತೂರು ಬಿ.ಎಸ್.ನಗರದ ಬಪ್ಪನ್ ಕುಂಞಿಯವರ ಪುತ್ರಿ ಫಾತಿಮತ್ ಅಫ್ರೀನ (24) ನಾಪತ್ತೆಯಾದ ಯುವತಿ. ಈ ಬಗ್ಗೆ ತಾಯಿ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ಮಧ್ಯಾಹ್ನ 2 ಗಂಟೆಗೆ ಫಾತಿಮತ್ ಅಫ್ರೀನ ಮನೆಯಿಂದ ಹೊರಗೆ ಹೋಗಿದ್ದಾಳೆ. ರಾತ್ರಿಯಾ ದರೂ ಮರಳಿ ಬಾರದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.






