ಮುಳ್ಳೇರಿಯ: ತಮ್ಮ ವಕೀಲ ವೃತ್ತಿಯೊಂದಿಗೆ ರೈತರ, ಶೋಷಿತ ಜನ ವಿಭಾಗದ ಉನ್ನತಿಗಾಗಿ ದುಡಿದ ಎಂ ರಾಮಣ್ಣ ರೈವರ ಆದರ್ಶ ಜೀವನ ಎಲ್ಲರಿಗೂ ಮಾದರಿಯಾಗಲಿ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ, ಮಾಜಿ ಶಾಸಕ ಎಂ ರಾಜಗೋಪಾಲನ್ ನುಡಿದರು. ವÆರು ಬಾರಿ ಕಾಸರಗೋಡು ಸಂಸದರಾಗಿ, 11 ವರ್ಷಗಳ ಕಾಲ ಕಾಸರಗೋಡು ನಗರ ಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಎಂ ರಾಮಣ್ಣ ರೈ ಅವರ ಸಾರ್ವಜನಿಕ ಜೀವನ ನಮಗೆಲ್ಲ ಮಾದರಿಯಾಗಿದೆ ಎಂದರು. ಗಾಡಿಗುಡ್ಡೆಯಲ್ಲಿ ಜರಗಿದ ಎಂ ರಾಮಣ್ಣ ರೈ ಯವರ 16ನೇ ಸಂಸ್ಮರಣಾ ವಾರ್ಷಿಕ ದಿನಾಚರಣೆಯ ಅಂಗವಾಗಿ ನಡೆದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬೆಳಿಗ್ಗೆ ಸ್ಮೃತಿ ಮಂಟಪದಲ್ಲಿ ಪುಷ್ಪಾರ್ಚನೆ ನಡೆಸಲಾಯಿತು. ಸಿಪಿಎಂ ವಲಯ ಕಾರ್ಯ ದರ್ಶಿ ಎಂ ಮಾಧವನ್ ಸ್ಮೃತಿ ಮಂ ಟಪದಲ್ಲಿ ಪತಾಕೆ ಹಾರಿಸಿದರು.ಸಂಜೆ ನಡೆದ ಮೆರವಣಿಗೆ ಮತ್ತು ಸಭೆಯನ್ನು ಎಂ ರಾಜಗೋಪಾಲ್ ಉದ್ಘಾಟಿಸಿದರು. ಸಿ ಎಚ್ ರಾಮಚಂದ್ರನ್ ಅಧ್ಯಕ್ಷತೆ ವಹಿಸಿದರು. ಸಿಜಿ ಮ್ಯಾಥ್ಯು ಎ.ಪಿ ಕುಶಲನ್, ಎಂ ನಾಸರ್, ಸಿ ರಾಜನ್ ಮಾತನಾಡಿದರು. ಕೆ ಪ್ರಕಾಶನ್ ಸ್ವಾಗತಿಸಿದರು.






