25 ವರ್ಷದಿಂದಿದ್ದ ಬೃಹತ್ ಹೊಕ್ಕುಳ ಹರ್ನಿಯಕ್ಕೆ ಮುಳ್ಳೇರಿಯ ಕೋ ಆಪರೇಟಿವ್ ಮೆಡಿಕಲ್ ಸೆಂಟರ್‌ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

ಮುಳ್ಳೇರಿಯ: ಸುಮಾರು 25 ವರ್ಷದಿಂದ ಬೆಳೆಯುತ್ತಿದ್ದ ಬೃಹತ್ ಗಾತ್ರದ ಹೊಕ್ಕುಳ ಹರ್ನಿಯಾವನ್ನು ಮುಳ್ಳೇರಿಯ ಕೋ-ಆಪರೇಟಿವ್ ಮೆಡಿಕಲ್ ಸೆಂಟರ್‌ನಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ತೆರವುಗೊಳಿಸಲಾಯಿತು. 62 ವರ್ಷದಿಂದ ಮಹಿಳೆಯ ಅಂದಾಜು 10×8 ಸೆ.ಮೀ. ದೊಡ್ಡದಾದ ಹಲವು ಕಾಲದಿಂದಿದ್ದ ಹೊಕ್ಕುಳ ಹರ್ನಿಯವನ್ನು ಜನರಲ್ ಸರ್ಜನ್ ಡಾ| ಉದತ್ತ್ ಎಂ.ರ ನೇತೃತ್ವದಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ತೆಗೆಯಲಾಗಿದೆ. ಹರ್ನಿಯ ಚೀಲದೊಳಗೆ ಓಮೆಂಟಮ್ ಎಂದು ಕರೆಯಲ್ಪಡುವ ಹೊಟ್ಟೆಯ ಒಳಭಾಗದಲ್ಲಿ ಕೊಬ್ಬಿನ ಅಂಗಾಂಶ ಸಿಲುಕಿಕೊಂಡಿತ್ತು. ಶಸ್ತ್ರ ಚಿಕಿತ್ಸೆ ವೇಳೆ ಹರ್ನಿಯ ಚೀಲವನ್ನು ಎಚ್ಚರಿಕೆಯಿಂದ ಬೇರ್ಪಡಿಸಿ, ಓಮೆಂಟಮ್‌ನ ಭಾಗವನ್ನು ತೆಗೆದು ಹಾಕಿ ಸುಮಾರು 3×1.5 ಸೆ.ಮೀ. ಗಾತ್ರದ ಹೊಟ್ಟೆಯ ಗೋಡೆಯ ದೋಷವನ್ನು ಸರಿಪಡಿಸಲಾಯಿತು. ಅರಿವಳಿಕೆ ತಜ್ಞ ಡಾ| ಅನೂಪ್ ಮೇಲ್ವಿಚಾರಣೆಯಲ್ಲಿ ಅರಿವಳಿಕೆ ನೀಡಲಾಯಿತು. ಎರಡು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ರೋಗಿ ಈಗ ಚೇತರಿಸುತ್ತಿದ್ದಾರೆ.

25 ವರ್ಷಗಳಿಂದ ಹರ್ನಿಯಾ ಇದ್ದರೂ ಅದನ್ನು ನಿರ್ಲಕ್ಷಿಸಿರುವುದು ರೋಗಕ್ಕೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ಪಡೆಯುವುದು ಎಷ್ಟು ಅಗತ್ಯ ಎಂಬುದಕ್ಕೆ ಉದಾಹರಣೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮುಳ್ಳೇರಿಯ ಕೋ-ಆಪರೇಟಿವ್ ಮೆಡಿಕಲ್ ಸೆಂಟರ್‌ನಲ್ಲಿ ತಜ್ಞ ವೈದ್ಯರ ತಂಡ ಹಾಗೂ ಅಗತ್ಯ ವೈದ್ಯಕೀಯ ಸೌಲಭ್ಯಗಳೊಂದಿಗೆ ವಿವಿಧ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

RELATED NEWS

You cannot copy contents of this page