ಕಾಸರಗೋಡು: ಇಲಿ ವಿಷ ಹೊಟ್ಟೆಗೆ ಸೇರಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟರು. ಕೂಡ್ಲು ಮನ್ನಿಪ್ಪಾಡಿಯ ಕಾನತ್ತಿಕರ ಹೌಸ್ನ ಶಶಿಧರ (39) ಮೃತಪಟ್ಟವರು. ದಿನಗಳ ಹಿಂದೆ ಇಲಿ ವಿಷ ಹೊಟ್ಟೆಗೆ ಸೇರಿದ ಹಿನ್ನೆಲೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಯುವಕನನ್ನು ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬಳಿಕ ಮಂಗಳೂ ರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ನಿನ್ನೆ ಮಧ್ಯಾಹ್ನ ನಿಧನ ಸಂಭವಿಸಿದೆ. ನಿರ್ಮಾಣ ಕಾರ್ಮಿಕನಾಗಿದ್ದ ಶಶಿಧರ ಅವಿವಾಹಿತರಾಗಿದ್ದರು. ಕುಂಞಿರಾಮ ಮಣಿಯಾಣಿ- ಶಂಕರಿಯಮ್ಮ ದಂಪತಿ ಪುತ್ರನಾಗಿದ್ದಾರೆ. ಮೃತರು ಸಹೋದರಿಯರಾದ ಜಯಶ್ರೀ, ಜಲಜ, ವನಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







