ಕಾಸರಗೋಡು: ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಪೆರುಂಬಳ ಕೋಳಿಯಡ್ಕದಿಂದ ನಾಪತ್ತೆಯಾದ ಗೃಹಿಣಿ ಇನ್ನೋರ್ವ ಯುವಕನನ್ನು ಮದುವೆ ಯಾಗಿರವುದಾಗಿ ತಿಳಿದುಬಂದಿದೆ. ಹಲೀಮ ಸದಿಯ ಎಂಬಾಕೆ ತೃಶೂರು ನಿವಾಸಿಯಾದ ಅಜಯ್ ಎಂಬಾತನನ್ನು ಮದುವೆಯಾಗಿ ಚೆರುತುರುತ್ತಿ ಪೊಲೀಸರ ಮುಂದೆ ಹಾಜರಾಗಿದ್ದಾರೆ. ಈ ವಿಷಯವನ್ನು ತೃಶೂರು ಪೊಲೀಸರು ಮೇಲ್ಪರಂಬ ಪೊಲೀಸರಿಗೆ ತಿಳಿಸಿದ್ದಾರೆ. ಸೋಮವಾರ ರಾತ್ರಿ 11.30ರಿಂದ ಮಂಗಳವಾರ ಬೆಳಿಗ್ಗೆ 6 ಗಂಟೆ ಮಧ್ಯೆಗಿನ ಸಮಯದಲ್ಲಿ ಯುವತಿ ಮನೆಯಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ತಂದೆ ಮೇಲ್ಪರಂಬ ಪೊಲೀಸರಿಗೆ ದೂರು ನೀಡಿದ್ದರು. ಹಲೀಮ ಗಲ್ಫ್‌ನಲ್ಲಿದ್ದ ಸಂದರ್ಭದಲ್ಲಿ ಅಜಯ್‌ನನ್ನು ಪರಿ ಚಯಗೊಂಡಿದ್ದಳೆಂದು ದೂರಿನಲ್ಲಿ ತಿಳಿಸಲಾಗಿದೆ. ನಾಪತ್ತೆಯಾದ ಯುವತಿಯ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಂತೆ ಯುವತಿ ಹಾಗೂ ಅಜಯ್ ಮದುವೆಯಾಗಿ ಪೊಲೀಸ್ ಠಾಣೆಯಲ್ಲಿ ಹಾಜರಾದ ವಿಷಯ ಚೆರುತುರುತ್ತಿ ಪೊಲೀಸರಿಂದ ಮೇಲ್ಪರಂಬ ಪೊಲೀಸರಿಗೆ ತಿಳಿದುಬಂದಿದೆ.






