ಕಾಸರಗೋಡು: ಕೆಲಸದ ಮಧ್ಯೆ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಕೆಎಸ್‌ಇಬಿ ನೌಕರ ನಿಧನಹೊಂದಿದರು. ಬಳಾಂತೋಡು ಕೆಎಸ್‌ಇಬಿ ಕಚೇರಿಯ ಲೈನ್‌ಮ್ಯಾನ್ ಕಲ್ಲಪ್ಪಳ್ಳಿ ಪಾಡಿ ಕೊಚ್ಚಿಯ ನಿವಾಸಿ ಸುರೇಶ್ (44) ನಿಧನಹೊಂದಿದರು. ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ನಿಧನ ಸಂಭವಿಸಿದೆ.
ಕಳೆದ ಅಗೋಸ್ತ್ 15ರಂದು ಕಲ್ಲಪಳ್ಳಿ ಪಾಡಿಕೊಚ್ಚಿಯಲ್ಲಿ ವಿದ್ಯುತ್ ಇಲ್ಲವೆಂದು ಫ್ಯೂಸ್ ಹಾಕುತ್ತಿದ್ದ ವೇಲೆ ಶಾಕ್ ತಗಲಿತ್ತು. ಕೂಡಲೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವು ದಿನಗಳ ಹಿಂದೆ ಅಲ್ಲಿಂದ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಣ್ಣಯ್ಯ ನಾಯ್ಕ್,-ಮೀನಾಕ್ಷಿ ದಂಪತಿ ಪುತ್ರನಾದ ಮೃತರು ಪತ್ನಿ ಗಂಗಾ,ಮಕ್ಕಳಾದ ಧನುಶ್ರೀ, ಧನುಷ್, ಸಹೋದರ ನಂದಕುಮಾರ್, ಸಹೋದರಿ ಸಾವಿತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






