ಕೋಳಿ ಅಂಕ ಅಡ್ಡೆಗೆ ಪೊಲೀಸ್ ದಾಳಿ : 7 ಮಂದಿ ವಿರುದ್ಧ ಪ್ರಕರಣ ದಾಖಲು; ನಗದು ಸಹಿತ 7 ಕೋಳಿ ವಶ

ಬದಿಯಡ್ಕ: ಬೇಳ ಬಿರ್ಮಿನಡ್ಕ ಪಡಿಯಡ್ಪು ಎಂಬಲ್ಲಿ ನಡೆಯುತ್ತಿದ್ದ ಕೋಳಿಅಂಕ ಅಡ್ಡೆಗೆ ಬದಿಯಡ್ಕ ಪೊಲೀಸರು ನಿನ್ನೆ ಸಂಜೆ ದಾಳಿ ನಡೆಸಿ ಏಳು ಮಂದಿಯನ್ನು ಸೆರೆಹಿಡಿದಿದ್ದಾರೆ.

ಮಾತ್ರವಲ್ಲ ಈ ಅಡ್ಡೆಯಿಂದ ಏಲು ಕೋಳಿಗಳು, 3800 ರೂ. ವಶಪಡಿಸಿ ಕೊಂಡಿದ್ದಾರೆ.  ಬಂಬ್ರಾಣದ ಜಯರಾಮ್ (36)ಕುಂಟಾರಿನ ಪದ್ಮನಾಭ ಎಂ (45), ನೀರ್ಚಾಲಿನ ನಾರಾಯಣ ಎನ್ (45), ಪಳ್ಳಿಕ್ಕೆರೆ ಪಾಕಂನ ಶಶಿ (65), ಪೆರಡಾಲ ಪೀಲಿತ್ತಡ್ಕದ ಪ್ರಜ್ವಲ್ (25), ಪೆರುಂಬಳ ಕೋಳಿಯಡ್ಕದ ಪ್ರಮೋದ್ ಕೆ (41) ಮತ್ತು ಕುಂಬಳೆ ಮುಜುಂ ಗಾವಿನ ಚಂದ್ರ (45) ಎಂಬವರನ್ನು ಪೊಲೀಸರು ವಶಕ್ಕೆ ತೆಕೆದುಕೊಂಡು ಪ್ರಕರಣ ದಾಖಲಿಸಿಕೊಂಡು ಅವರಿಗೆ ನೋಟೀಸು ನೀಡಿದರು. ಬದಿಯಡ್ಕ ಠಾಣೆಯ ಎಸ್‌ಐ ಸುನಿಲ್  ಕುಮಾರ್ ನೇತೃತ್ವದ ಪೊಲೀಸರ ತಂಡ ಈ ದಾಳಿ ನಡೆಸಿದೆ.

RELATED NEWS

You cannot copy contents of this page