ಅಂಚೆ ಕಚೇರಿ ಬೋರ್ಡ್‌ನ್ನು ಬೋರ್ಡ್ ಮರೆಮಾಡಿದಾಗ, ಹೋಟೆಲ್ ಬೋರ್ಡನ್ನು ಪೊದೆ ಮರೆ ಮಾಡಿತು

ಮಧೂರು: ಮಧೂರು ಪಂಚಾ ಯತ್ ಕಚೇರಿಯ ಮಲ್ಟಿ ಕಾಂಪ್ಲೆಕ್ಸ್‌ನಲ್ಲಿ ಹಲವಾರು ಸಂಸ್ಥೆಗಳು ಕಾರ್ಯಾ ಚರಿಸುತ್ತಿದ್ದು, ಇದರ ಜೊತೆಯಲ್ಲಿ ರಾಮದಾಸ ನಗರ ಬ್ರಾಂಚ್ ಅಂಚೆ ಕಚೇರಿಯೂ ಸೇರಿದೆ. ಅಂಚೆ ಕಚೇರಿ ಇಲ್ಲಿದೆ ಎಂದು ಜನರಿಗೆ ತಿಳಿಸಲು ಇರಿಸಿದ್ದ ಬೋರ್ಡ್‌ನ ಮುಂಭಾಗದಲ್ಲಿ ಹೋಟೆಲ್ ಒಂದರ ಬೋರ್ಡ್ ಕೂಡಾ ಸ್ಥಾಪಿಸಲಾಗಿದೆ. ಹೋಟೆ ಲ್‌ನ ಬೋರ್ಡ್ ಅಂಚೆ ಕಚೇರಿಯ ಬೋರ್ಡನ್ನು ಮರೆಮಾಡಿದೆ ಎಂದು ಕೆಲವರು ಪಂಚಾಯತ್‌ನಲ್ಲಿ ದೂರಿ ದ್ದರು. ಆದರೆ ಪಂಚಾಯತ್ ಮೌನ ವಹಿಸಿದೆ ಎಂದು ದೂರು ನೀಡಿದವರು ತಿಳಿಸುತ್ತಾರೆ.

ನಿನ್ನೆ ವಿಶ್ವ ಅಂಚೆ ದಿನವಾಗಿದ್ದು, ಅಂದಾದರೂ ಅಂಚೆ ಕಚೇರಿಯ ಬೋರ್ಡನ್ನು ಹಾಗೂ ಅಂಚೆ ಕಚೇರಿ ಯ ಪರಿಸರವನ್ನು ಶುಚಿಗೊಳಿಸುವರು ಎಂದು ಸ್ಥಳೀಯರು ಗ್ರಹಿಸಿದ್ದರು. ಆದರೆ ಅಂಚೆ ಕಚೇರಿಗೆ ಬೋರ್ಡ್ ಯಾಕೆ ಎಂದೂ ಅವರು ತಿಳಿದಿರ ಬೇಕೆಂದು ಇನ್ನು ಕೆಲವರು ನುಡಿಯು ತ್ತಾರೆ. ಅಂಚೆ ಕಚೇರಿಗೆ ಬೋರ್ಡ್ ಇದ್ದರೂ, ಇಲ್ಲದಿದ್ದರೂ, ಪರಿಸರ ಶುಚಿಯಾ ಗಿದ್ದರೂ, ಇಲ್ಲದಿದ್ದರೂ ಜನರು ಅಗತ್ಯವಿದ್ದರೆ ಬಂದೇ ಬರುತ್ತಾ ರೆಂದೂ, ಪ್ರತಿ ತಿಂಗಳು ನೌಕರರಿಗೆ ವೇತನ ಲಭಿಸಿಯೇ ಇರುತ್ತದೆ ಎಂದೂ ಅವರಿಗೆ ಖಚಿತವಿದೆಯಂತೆ. ನಿನ್ನೆ ವಿಶ್ವ ಅಂಚೆ ದಿನ ಹಾಗೂ ಇಂದು ದೇಶೀಯ ಅಂಚೆ ದಿನವಾಗಿದೆ.  ಅಲ್ಲದೆ ಇನ್ನು   ೧೫ದಿನ ಅಂಚೆ ವಾರಾಚರಣೆ ನಡೆಯಲಿದೆ. ಇಷ್ಟು ಗೌರವ ಕೇಂದ್ರ, ವಿಶ್ವವೇ ಅಂಚೆ ವ್ಯವಸ್ಥೆಗೆ ನೀಡುತ್ತಿ ದ್ದರೂ, ಅಂಚೆ ಕಚೇರಿಯೊಂದರ ಬೋರ್ಡನ್ನು ಇನ್ನೊಂದು ಬೋರ್ಡ್ ಇರಿಸಿ ಮರೆ ಮಾಡುತ್ತಿರುವುದು ಸರಿಯೇ ಎಂಬು ದು ಸ್ಥಳೀಯರ ಪ್ರಶ್ನೆ. ಆದರೆ ಈ ಮಧ್ಯೆ ಪೊದೆ ಬೆಳೆದು ಈ ಎರಡೂ ಬೋರ್ಡ್‌ಗಳನ್ನು ಈಗ ಮರೆ ಮಾಡಿದೆ. ಒಬ್ಬನು ಇನ್ನೊಬ್ಬನನ್ನು ವಂಚಿಸಿದರೆ ಪ್ರಕೃತಿ ಆತನನ್ನು ವಂಚಿಸುತ್ತದೆ ಎಂದು ಇಲ್ಲಿನ ಜನರು ಈ ವಿಷಯದ ಬಗ್ಗೆ ಹೇಳುತ್ತಿದ್ದಾರೆ.

RELATED NEWS

You cannot copy contents of this page