ಆರರ ಹರೆಯದ ಬಾಲಕಿಗೆ ಕಿರುಕುಳ ಯತ್ನ: 60ರ ಹರೆಯದ ವ್ಯಕ್ತಿ ಸೆರೆ

ಕಾಸರಗೋಡು: ಕೆಲಸಕ್ಕೆಂದು ತಲುಪಿದ ವ್ಯಕ್ತಿ ನೆರೆಮನೆಯ ಆರರ ಹರೆಯದ ಬಾಲಕಿಗೆ ಕಿರುಕುಳ ನೀಡಲೆತ್ನಿಸಿರುವುದಾಗಿ ದೂರಲಾಗಿದೆ. ಈ ಸಂಬಂಧ  ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂಡ ಚಂದೇರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತೃಕರಿಪುರ ಬೀರಿಚ್ಚೇರಿ ನಿವಾಸಿಯಾದ 60ರ ಹರೆಯದ ವ್ಯಕ್ತಿ ಸೆರೆಗೀಡಾಗಿದ್ದಾನೆ.  ಪಡನ್ನ ಪಂಚಾಯತ್ ವ್ಯಾಪ್ತಿಯ ಪ್ರದೇಶವೊಂದರಲ್ಲಿ ಇತ್ತೀಚೆಗೆ ಘಟನೆ ನಡೆದಿದೆ. ಆರೋಪಿಯಾದ ವ್ಯಕ್ತಿ  ಬಾಲಕಿಯ ನೆರೆಮನೆಗೆ ಕೆಲಸಕ್ಕಾಗಿ ತಲುಪಿದ್ದನು. ಈ ವೇಳೆ ಬಾಲಕಿಗೆ ಕಿರುಕುಳ ನೀಡಲೆತ್ನಿಸಿ ದ್ದಾನೆನ್ನಲಾಗಿದೆ. ಈತನ ಕೈಯಿಂದ  ತಪ್ಪಿಸಿ ಮನೆಗೆ ತಲುಪಿದ ಬಾಲಕಿ  ವಿಷಯ ತಿಳಿಸಿದ್ದಳು.

RELATED NEWS

You cannot copy contents of this page