ಮಂಜೇಶ್ವರದ ಕ್ಷಮಾ ರವೀಂದ್ರಳಿಗೆ ವುಮೆನ್ ಆಫ್ ಯೂನಿವರ್ಸ್‌ನಲ್ಲಿ ಸೋಷ್ಯಲ್‌ಆಕ್ಟಿವಿಟಿ ಪ್ರಶಸ್ತಿ

ತಲಪಾಡಿ: ವುಮೆನ್ ಆಫ್ ಯೂನಿವರ್ಸ್ 2025 ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧೀಕರಿಸಿ ಭಾಗವಹಿಸಿದ ಮಂಜೇಶ್ವರ ಉದ್ಯಾವರ ನಿವಾಸಿ ಕ್ಷಮಾ ರವೀಂದ್ರನ್ ಪ್ರತಿಷ್ಠಿತ ಸೋಶ್ಯಲ್ ಆಕ್ಟಿವಿಟಿ ಪ್ರಶಸ್ತಿ ಗಳಿಸಿ ಜಿಲ್ಲೆ ಜೊತೆಗೆ ಭಾರತಕ್ಕೆ ಹೆಮ್ಮೆ ತಂದಿದ್ದಾರೆ.

ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಭಾರತದ ಪ್ರತಿನಿಧಿಯಾದ ಕ್ಷಮಾ ರವೀಂದ್ರನ್ ಪ್ರತಿಭೆ, ವ್ಯಕ್ತಿತ್ವ, ಸಾಮಾಜಿಕ ಬದ್ಧತೆ, ಸೇವಾ ಮನೋಭಾವದ ಮೂಲಕ ಅಂತಾರಾಷ್ಟ್ರೀಯ ಗಮನ ಸೆಳೆದರು.

ಮಂಜೇಶ್ವರದ ಉದ್ಯಮಿ ರವೀಂದ್ರ ಕೆ.ಎಚ್-ಕುಶಲ್ ಆರ್  ದಂಪತಿ ಪುತ್ರಿಯಾದ ಕ್ಷಮಾ ಮಂಜೇಶ್ವರದಲ್ಲಿ ಹುಟ್ಟಿ ಬೆಳೆದು  ಕೇರಳ-ಕರ್ನಾಟಕದಲ್ಲಿ ಶಿಕ್ಷಣ ಪೂರೈಸಿ, ೧೨ ವರ್ಷಗಳ ಕಾಲ ಜಿಸಿಸಿ ರಾಷ್ಟ್ರಗಳಲ್ಲಿ ವಾಸವಾಗಿದ್ದರು. ಪ್ರಸ್ತುತ ಮಂಗಳೂರಿನ ಮಾಲ್ ಕಟ್ಟಡದಲ್ಲಿ ಸೋಲೋ ಹೀಲಿಂಗ್ ಸೆಂಟರ್ ನಡೆಸುತ್ತಿದ್ದಾರೆ. ಇವರು ಈ ಮೊದಲು ಮುಂಬೈಯಲ್ಲಿ ನಡೆದ ಮಿಸೆಸ್ ಇಡಿಯೂ ಕ್ವೀನ್ ಆಫ್ ಸಬ್ ಸ್ಟೆನ್ಸ್ ಸ್ಪರ್ಧೆಯಲ್ಲಿ ಫಸ್ಟ್ ರನ್ನರ್ ಅಫ್ ಸ್ಥಾನದ ಜೊತೆಗೆ  ಬ್ಯೂಟಿ ವಿದ್ ಪರ್ಪಸ್ ಪ್ರಶಸ್ತಿ ಗಳಿಸಿದ್ದರು.

RELATED NEWS

You cannot copy contents of this page