ಕುಂಬಳೆ: ಕುಂಬಳೆ ಪೇಟೆಯಲ್ಲಿ ಸಾರಿಗೆ ಪರಿಷ್ಕಾರಗಳಿಗೆ ಸಂಬಂಧಿಸಿದ ವಿವಾದಗಳಿಗೆ ಶಾಶ್ವತ ಪರಿಹಾರವಿಲ್ಲದೆ ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತಿದೆ.
ಇದೀಗ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆ ಬಳಿಯ ಕೆಎಸ್ಟಿಪಿ ರಸ್ತೆಯಲ್ಲಿ ರಸ್ತೆ ವಿಭಾಜಕಗಳನ್ನಿರಿ ಸಿರುವುದು ಮತ್ತೆ ವಿವಾದ ಹುಟ್ಟಿಕೊಳ್ಳಲು ಕಾರಣವಾ ಗಿದೆ. ಕುಂಬಳೆ ಶಾಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ಶಾಲಾ ಕ್ರೀಡಾಕೂಟದ ಹಿನ್ನೆಲೆಯಲ್ಲಿ ಜಿಲ್ಲಾ ಸಹಕಾರಿ ಆಸ್ಪತ್ರೆ ಬಳಿ ರಸ್ತೆಯಲ್ಲಿ ವಿಭಾ ಜಕಗಳನ್ನಿರಿಸಲಾಗಿತ್ತು. ಕುಂಬಳೆ ಪೊಲೀಸರ ನೇತೃತ್ವದಲ್ಲಿ ರಸ್ತೆ ವಿಭಾಜಕಗಳನ್ನಿರಿಸಿದ್ದು, ಶಾಲಾ ಕ್ರೀಡಾಕೂಟ ಮುಕ್ತಾಯಗೊಂಡ ತಕ್ಷಣ ತೆರವುಗೊಳಿಸುವುದಾಗಿ ಬಸ್ ನೌಕರರಿಗೆ ಭರವಸೆ ನೀಡಲಾಗಿತ್ತು. ಕ್ರೀಡಾಕೂಟ ನಿನ್ನೆ ಕೊನೆಗೊಂಡಿದೆ. ಇದರಿಂದ ರಸ್ತೆ ವಿಭಾಜಕಗಳನ್ನು ತೆರವುಗೊಳಿಸಬೇಕಾಗಿತ್ತು. ಆದರೆ ಅವು ಗಳನ್ನು ತೆರವುಗೊಳಿಸದೆ ಹೆಚ್ಚುವರಿ ಯಾಗಿ ಸಿಮೆಂಟ್ನಿಂದ ನಿರ್ಮಿಸಿದ ವಿಭಾಜಕಗಳನ್ನು ಇರಿಸಿ ಮತ್ತಷ್ಟು ತಡೆ ಸೃಷ್ಟಿಸಲಾಗಿದೆ ಎಂಬ ಆರೋಪ ಉಂಟಾಗಿದೆ. ಕೆಎಸ್ಟಿಪಿ ರಸ್ತೆ ನಿರ್ಮಾಣ ವೇಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ಸಹಿತ ತುರ್ತಾಗಿ ವಾಹನಗಳು ತೆರಳಲು ಅನುಕೂಲವಾಗು ವಂತೆ ಇಲ್ಲಿ ರಸ್ತೆ ವಿಭಾಜಕ ನಿರ್ಮಿ ಸಿರಲಿಲ್ಲ. ಆದರೆ ಈಗ ರಸ್ತೆ ವಿಭಾಜಕ ಗಳನ್ನಿರಿಸಿರುವುದು ಆಸ್ಪತ್ರೆಗೆ ತೆರಳುವ ವಾಹನಗಳಿಗೆ ಅಡಚಣೆಯಾಗಿದೆ. ಮಾತ್ರವಲ್ಲದೆ ಸೀತಾಂಗೋಳಿ ಭಾಗ ದಿಂದ ಬರುವ ಬಸ್ಗಳ ಸಂಚಾರಕ್ಕೂ ಸಮಸ್ಯೆ ಉಂಟಾಗಿದೆಯೆಂದು ದೂರಲಾಗಿದೆ. ನಾಲ್ಕು ದಿನಗಳ ಕ್ರೀಡಾಕೂಟ ಮುಗಿದ ಬಳಿಕ ರಸ್ತೆ ವಿಭಾಜಕಗಳನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದ ಪೊಲೀಸರು ಈಗ ಭರವಸೆಯನ್ನು ಉಲ್ಲಂಘಿಸಿದ್ದಾರೆಂದು ಬಸ್ ನೌಕರರು ಆರೋಪಿಸುತ್ತಿದ್ದಾರೆ. ರಸ್ತೆ ವಿಭಾಜಕ ತೆರವುಗೊಳಿಸದಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್ ನೌಕರರು ಇಂದು ರಾತ್ರಿ ಕುಂಬಳೆ ಸಿಐಯೊಂದಿಗೆ ಚರ್ಚೆ ನಡೆಸಲಿದ್ದಾರೆ. ಚರ್ಚೆಯಲ್ಲಿ ರಸ್ತೆ ವಿಭಾಜಕಗಳನ್ನು ತೆರವುಗೊಳಿಸಲು ಕ್ರಮ ಉಂಟಾಗದಿದ್ದಲ್ಲಿ ಸೋಮವಾರದಿಂದ ಪೆರ್ಲ, ಮುಳ್ಳೇರಿಯ, ಕಾಸರ ಗೋಡು-ತಲಪ್ಪಾಡಿ ರೂಟ್ನಲ್ಲಿ ಸಂಚರಿಸುವ ಖಾಸಗಿ ಸ್ ನೌಕರರು ಅನಿರ್ಧಿಷ್ಟಾ ವಧಿ ಮುಷ್ಕರ ನಡೆಸುವುದಾಗಿ ತಿಳಿಸಿದ್ದಾರೆ. ಬಸ್ ನೌಕರರ ಚಳವಳಿಗೆ ಪೂರ್ಣ ಬೆಂಬಲ ನೀಡಲು ಕುಂ ಬಳೆಯ ಆಟೋ ರಿಕ್ಷಾ ಹಾಗೂ ಗೂಡ್ಸ್ ವಾಹನ ನೌಕರರು ನಿರ್ಧರಿಸಿದ್ದಾರೆ. ಇದೇ ವೇಳೆ ಕುಂಬಳೆ ಪೇಟೆಯಲ್ಲಿ ಪದೇ ಪದೇ ಸಾರಿಗೆ ಅಡಚಣೆ ಸೃಷ್ಟಿಸುವುದರ ವಿರುದ್ಧ ಕಾನೂನಿನ ಮೊರೆ ಹೋಗುವುದಾಗಿಯೂ ಬಸ್ ನೌಕರರು ತಿಳಿಸಿದ್ದಾರೆ.






