ಕಾಸರಗೋಡು: ರಸ್ತೆ ನಿರ್ಮಾಣಕ್ಕಾಗಿ ತಂದಿರಿಸಿದ್ದ ೩೦ ಕಬ್ಬಿಣದ ಪೈಪ್‌ಗಳನ್ನು ಕದ್ದು ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ. ಪಿಲಿಕ್ಕೋಡ್ ಎಚ್ಚಿಕೋವಲ್ ಪಡಿಞಾರ ವೀಟಿಲ್ ಪಿ.ವಿ. ಪ್ರಜಿಲ್(33) ಮತ್ತು ಪಡನ್ನ ತೆಕ್ಕೇಕಾಡ್ ಪಾವೂರು ವೀಟಿಲ್ ಪಿ.ವಿ. ಶ್ರೀಜಿತ್ (36) ಬಂಧಿತ ಆರೋಪಿಗಳು. ಎಸ್‌ಐ ಟಿ. ಅಖಿಲ್‌ರ ನೇತೃತ್ವದ ಪೊಲೀಸರ ತಂಡ ಇವರನ್ನು ಬಂಧಿಸಿದೆ.
ಚೆರ್ಕಳ- ಕಾಲಿಕಡವ್ ರಸ್ತೆ ನಿರ್ಮಾಣಕ್ಕಾಗಿ ಗುತ್ತಿಗೆ ಸಂಸ್ಥೆಯಾದ ಮೆಘಾ ಸಂಸ್ಥೆ ರಸ್ತೆ ಬದಿ ತಂದಿರಿಸಿದ್ದ 30 ಕಬ್ಬಿಣದ ಪೈಪ್‌ಗಳನ್ನು ಮಿನಿ ಲಾರಿಗೇರಿಸಿ ಸಾಗಿಸಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಈ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪೈಲ್ ಕಳವು ಬಗ್ಗೆ ಮೆಘಾ ಸಂಸ್ಥೆಯ ಸೆಕ್ಯೂರಿಟಿ ಆಫೀಸರ್ ಪುಷ್ಪರಾಜನ್ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.






