ಸುಟ್ಟು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತ್ಯು

 
ಹೊಸದುರ್ಗ: ಸುಟ್ಟು ಗಾಯ ಗೊಂಡು ಗಂಭೀರ ಅವಸ್ಥೆಯಲ್ಲಿ ಮಂ ಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತಪಟ್ಟರು. ವೆಳ್ಳಿಕೋತ್ ನಿವಾಸಿ ಪದ್ಮನಾಭನ್ (೬೦) ಮೃತ ಪಟ್ಟವರು. ಕಳೆದ ಗುರುವಾರ ಸಂಜೆ ೬ ಗಂಟೆ ವೇಳೆ ಮನೆಯಲ್ಲಿ ಸುಟ್ಟು ಗಾಯ ಗೊಂಡ ಸ್ಥಿತಿಯಲ್ಲಿ ಪದ್ಮನಾಭನ್‌ರನ್ನು ಪತ್ತೆಹಚ್ಚಲಾಗಿತ್ತು. ಬಳಿಕ ಕಾಞಂಗಾಡ್ ಆಸ್ಪತ್ರೆಗೆ ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಇದೇ ವೇಳೆ ಸಾವಿನಲ್ಲಿ ಶಂಕೆ ಇದೆ ಎಂದು ಆರೋಪಿಸಿ ಸಹೋದರ ಚೆರುವತ್ತೂರು ಓರಿ ನಿವಾಸಿ ಪಿ.ಕೆ. ಜನಾರ್ದನನ್ ಪೊಲೀಸರಿಗೆ ದೂರು ನೀಡಿದ್ದಾರೆ. ಒಂದು ವಾರದ ಹಿಂದೆ ಸಂಬಂಧಿಕರಾದ ಮಹಿಳೆ ಹಾಗೂ ಮಗುವನ್ನು ಹಲ್ಲೆಗೈದ ಘಟನೆಯಲ್ಲಿ ಪದ್ಮನಾಭನ್ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದರು. ಇದರ ಬೆನ್ನಲ್ಲೇ ಇವರು ಬೆಂಕಿ ತಗಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಅಸಹಜ ಸಾವಿಗೆ ಕೇಸು ದಾಖಲಿಸಿದ ಹೊಸದುರ್ಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page