ಬಾಡೂರು ಎಸ್‌ಸಿ ಉನ್ನತಿಯಲ್ಲಿ 1 ಕೋಟಿ ರೂ. ವೆಚ್ಚದ ಯೋಜನೆ ಪೂರ್ತೀಕರಣ: ಶಾಸಕ ಉದ್ಘಾಟನೆ

ಬಾಡೂರು: ಪುತ್ತಿಗೆ ಪಂ.ನ ಬಾಡೂರು ಎಸ್‌ಸಿ ಉನ್ನತಿಯ ನಿವಾಸಿಗಳ ದೀರ್ಘ ಕಾಲದ ಕನಸು ಸಾಕಾರಗೊಂಡಿದೆ. ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯ ಅಂಬೇಡ್ಕರ್ ಗ್ರಾಮ ಅಭಿವೃದ್ಧಿ ಯೋಜನೆಯಲ್ಲಿ ಒಳಪಡಿಸಿ ಒಂದು ಕೋಟಿ ರೂ. ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಪೂರ್ತಿಗೊಳಿಸಿ ಲೋಕಾರ್ಪಣೆಗೈಯ್ಯಲಾಯಿತು. ಬಾಡೂರು ನಗರದ ಉನ್ನತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎಕೆಎಂ ಅಶ್ರಫ್ ಯೋಜನೆಗಳ ಪೂರ್ತೀಕರಣ ಉದ್ಘಾಟಿಸಿದರು.

ಶಾಸಕ ಎಕೆಎಂ ಅಶ್ರಫ್‌ರ ಶಿಫಾರಸು ಪ್ರಕಾರ ಅಂಬೇಡ್ಕರ್ ಗ್ರಾಮ ಅಭಿವೃದ್ಧಿ ಯೋಜನೆಯಲ್ಲಿ ಬಾಡೂರು ನಗರವನ್ನು ಸೇರಿಸಲಾಗಿತ್ತು.  ಯೋಜ ನೆಯ ಅಂಗವಾಗಿ ಬಾಡೂರು ನಗರದ ೬೦ ಪರಿಶಿಷ್ಟ ಜಾತಿ ಕುಟುಂಬಗಳ ಮನೆಗಳ ಪುನರುದ್ಧಾರ ಕಮ್ಯೂನಿಟಿ ಹಾಲ್‌ನ ನವೀಕರಣೆ, ಸೋಲಾರ್ ಬೀದಿ ದೀಪಗಳನ್ನು ಸ್ಥಾಪಿಸುವುದು ಎಂಬೀ ಪ್ರಮುಖ ಕಾಮಗಾರಿಗಳನ್ನು ಪೂರ್ತಿಗೊಳಿಸಲಾಗಿದೆ. ಜಿಲ್ಲಾ ನಿರ್ಮಿತಿ ಕೇಂದ್ರ ನಿರ್ವಹಣಾ ಹೊಣೆಯನ್ನು ವಹಿಸಿಕೊಂಡಿತ್ತು. ಕಾರ್ಯಕ್ರಮದಲ್ಲಿ ಪಂ. ಅಧ್ಯಕ್ಷೆ ಫಿದಾ ಊಜಂಪದವು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಂ. ಸದಸ್ಯ ಸೋಮಶೇಖರ ಜೆ.ಎಸ್, ಪುತ್ತಿಗೆ ಪಂ. ಉಪಾಧ್ಯಕ್ಷ ಇ.ಕೆ. ಮುಹಮ್ಮದ್ ಕುಂಞಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಕೀನ ಐ.ಎ, ಅನಿತಾ ಎಂ, ಮಂಜೇಶ್ವರ ಬ್ಲೋಕ್ ಪಂ. ಸದಸ್ಯ ಬಶೀರ್ ಕೊಟ್ಟೂಡಲ್, ಸದಸ್ಯರಾದ ಬಿ.ಎಂ. ಹಮೀದ್ ಬಾಡೂರು, ಶಿವಪ್ಪ ರೈ ಭಾಗವಹಿಸಿದರು. ಜೊತೆಗೆ ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಆಫೀಸರ್ ಮನೋ ಹರನ್ ಕೆ, ಬ್ಲೋಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ಆಫೀಸರ್ ಶರತ್ ಟಿ.ವಿ, ಸೀನಿಯರ್ ಸುಪರಿಂಟೆಂಡೆಂಟ್ ತಿರುಮಲೇಶ್ ಪಿ.ಕೆ, ಪ್ರೊಜೆಕ್ಟ್ ಇಂಜಿನಿ ಯರ್ ಬಿಂದು ಉಪಸ್ಥಿತರಿದ್ದರು.

You cannot copy contents of this page