ವಂದೇ ಮಾತರಂ ದೇಶವನ್ನು ಐಕ್ಯತೆಯಿಂದ ಒಗ್ಗೂಡಿಸಿದ ಸ್ಪೂರ್ತಿಯ ರಣಮಂತ್ರ-ರಾಜೇಶ್ ಪದ್ಮಾರ್

ಎಡನೀರು ಮಠದಲ್ಲಿ ವಂದೇ ಮಾತರಂ-೧೫೦ ವಿಶೇಷ ಉಪನ್ಯಾಸಎಡನೀರು: ವಂದೇ ಮಾತರಂ ರಾಷ್ಟ್ರೀಯ ಐಕ್ಯತೆಯ ಗಾನವಾಗಿದ್ದು, ಎಲ್ಲರನ್ನೂ ಒಂದುಗೂಡಿಸುವ ಮಂತ್ರವಾಗಿದೆ. ಇದು ಕಣಕಣ ದಿಂದಲೂ ಮೊಳಗಿ ಬರಬೇಕು. ಆದರೆ ಮಾತ್ರ ಭಾರತ ಎದ್ದು ನಿಲ್ಲುವುದು ಎಂಬುದಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ನುಡಿದರು. ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀ ಎಡನೀರುಮಠ ಮತ್ತು ಮಂಥನ ಕಾಸರ ಗೋಡು  ಇವುಗಳ ಸಂಯುಕ್ತಾಶ್ರಯದಲ್ಲಿ ಎಡನೀರು ಮಠದಲ್ಲಿ ನಿನ್ನೆ ಆಯೋಜಿಸ ಲಾದ ವಂದೇ ಮಾತರಂ-೧೫೦ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು. ವಂದೇ ಮಾತರಂ ಗೀತೆ ಹುಟ್ಟಿಕೊಂಡ ರೀತಿಯನ್ನು ಸಮಗ್ರವಾಗಿ ವಿವರಿಸಿದ ಅವರು ವಂದೇ ಮಾತರಂ ಗೀತೆ ದೇಶದ ಕಥೆಯಾಗಿದೆ.  ವಂದೇ ಮಾತರಂನ ಇತಿಹಾಸ ದೇಶದ ಇತಿಹಾಸ. ವಂದೇ ಮಾತರಂ ಹಾಡುವಂತದ್ದು ಭಾರತೀಯ ಸಾಂಸ್ಕೃತಿಕ ಆಸ್ಮಿತೆ. ಆ ದೃಷ್ಟಿಯಿಂದ  ಇದು ನಮ್ಮ ಸಾಂಸ್ಕೃತಿಕ ಜೀವಂತಿಕೆಯನ್ನು ಪರಿಚಯಿಸುವ ಮತ್ತು ನೆನಪಿಸುವ ಗೀತೆಯಾಗಿದೆ  ಎಂದರು. ವಂದೇ ಮಾತರಂಗಾಗಿಯೇ ಜೀವ ಕೊಟ್ಟಂತಹ ಮಾದಂಗಿನಿ ಹಜ್ರರಂತಹವರ ಹೆಸರನ್ನು ನಾವು  ನೆನಪಿಟ್ಟುಕೊಳ್ಳಬೇಕು.  ಇಂತಹ ನೂರಾರು ಮಂದಿ ಇದಕ್ಕಾಗಿ ಜೀವತೆತ್ತಿ ದ್ದಾರೆ.  ಈ ಹಿನ್ನೆಲೆಯಲ್ಲಿ ವಂದೇ ಮಾತರಂ ಹಾಡಬಾರದು ಎಂದು ಹೇಳುವವರು ವಂದೇ ಮಾತರಂ ಹಾಡು ಏನನ್ನು ಸಾರುತ್ತದೆ ಎಂಬುವುದನ್ನು ಮೊದಲು ತಿಳಿಯಬೇಕು ಎಂದರು. ನಾಡು ನುಡಿಗಳಲ್ಲಿ ವಂದೇ ಮಾತರಂನ ಪ್ರಾಧಾನ್ಯತೆಯನ್ನು ಗಮನಕ್ಕೆ ತರಬೇಕು. ಈ ಗೀತೆ ರಾಷ್ಟ್ರದ ರಣಮಂತ್ರವಾಗಿದೆ.  ಸ್ಪೂರ್ತಿಯ ಗೀತೆಯೂ ಆಗಿದೆ.  ವಂದೇ ಮಾತರಂ ದೇಶದ ಕೋಟ್ಯಂತರ ಮಂದಿಯ ಕಂಠದಲ್ಲಿ ನಿನಾದ ಎಬ್ಬಿಸಿ ಆಂಗ್ಲರನ್ನು ದುರ್ಬಲಗೊಳಿಸಿದ ದೇಶಪ್ರೇಮದ ಕ್ರಾಂತಿಗೀತೆಯಾಗಿದೆ.  ವೇದಕಾಲೀನ ಸಂಸ್ಕೃತಿಯಂತೆ ದೇಶವನ್ನು ಮಾತೃಸ್ವರೂಪದಲ್ಲಿ ಕಂಡ ಗೀತೆಯಾಗಿದೆ. ಆದರೆ ಯಾರಿಗೆ ಮಾತೆ ಯರನ್ನು, ಮಹಿಳೆಯರನ್ನು ಪೂಜನೀಯ ಸ್ಥಾನದಲ್ಲಿ ಕಾಣಲಾಗುವುದಿಲ್ಲವೋ ಅವರಿಗೆ ಅದು ಸಹಿಸಲಾಗದು. ಆದ್ದರಿಂದಲೇ ಕೆಲವರು ವಂದೇ ಮಾತರಂನ್ನು ವಿರೋಧಿಸುತ್ತಾರೆ. ವಂದೇ ಮಾತರಂ  ಶತಮಾನದಿಂದ ದೇಶದ ಸಾಂಸ್ಕೃತಿಕ ಪ್ರಜ್ಞೆ ರೂಪಿಸಿದ ಗೀತೆ. ಅದಕ್ಕೆ ಅಗೌರವ ಸೂಚಿಸುವುದನ್ನು ಸಹಿಸಲಾಗದು ಎಂದು ರಾಜೇಶ್ ಪದ್ಮಾರ್ ತಿಳಿಸಿದರು.

ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯ ವರು ಉಪಸ್ಥಿತರಿದ್ದು, ಆಶೀರ್ವಚನ ನೀಡಿದರು. ಜಿಲ್ಲಾ ಸಂಘ ಚಾಲಕ ಪ್ರಭಾಕರನ್ ಮಾಸ್ತರ್ ಉಪಸ್ಥಿತರಿದ್ದರು.  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಂದಾಳು, ಅಖಿಲ ಭಾರತೀಯ  ಕುಟುಂಬ ಪ್ರಬೋಧನ್ ಕಜಂಪಾಡಿ ಸುಬ್ರಹ್ಮಣ್ಯ ಭಟ್, ರಾಷ್ಟ್ರೀ ಯ ಸ್ವಯಂ ಸೇವಕ ಸಂಘದ ಲೋಕೇಶ್ ಜೋಡುಕಲ್ಲು, ಪವಿತ್ರನ್ ಕುದ್ರೆಪ್ಪಾಡಿ, ನಿಜಿನ್, ದಿನೇಶ್ ಆರಿಕ್ಕಾಡಿ, ರಮೇಶ್ ಕಳರಿ ಸಹಿತ ಹಲವರು ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಲೇಖಕ ನಾರಾಯಣ ಶೇವಿರೆ ರಚಿಸಿ, ವಿಶ್ವಸಂವಾದ ಕೇಂದ್ರ ಕರ್ನಾಟಕ ಪ್ರಕಟಿಸಿದ  ಹಿಂದುತ್ವ ಭಾರತ, ಸ್ವತ್ವ ಎಂಬೀ ಪುಸ್ತಕಗಳನ್ನು ಸ್ವಾಮೀಜಿ ಯವರು ಬಿಡುಗಡೆಗೊಳಿಸಿ ದರು. ಬಾಲಕೃಷ್ಣ ನೀರ್ಚಾಲು ಸ್ವಾಗತಿಸಿ, ಮಹೇಶ್ ವಳಕ್ಕುಂಜ ವಂದಿಸಿದರು. ರಾಹುಲ್ ಪಾಯಿಚ್ಚಾಲ್, ಸವಿತಾ ಟೀಚರ್ ನೀರ್ಚಾಲು ನಿರೂಪಿಸಿದರು.

You cannot copy contents of this page