ಉತ್ತರ ಮಲಬಾರಿನ ಮೊದಲ ಮಕ್ಕಳ ತುರ್ತು ವೈದ್ಯಕೀಯ ವಿಭಾಗ, ‘ಕುಟ್ಟಿ ಡಾಕ್ಟರ್’ ಯೋಜನೆ ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ಉದ್ಘಾಟನೆ

ಕಣ್ಣೂರು: ಮಕ್ಕಳಿಗಿರುವ ತುರ್ತು ಚಿಕಿತ್ಸಾ ವಲಯದಲ್ಲಿ ನೂತನ ಇತಿ ಹಾಸ ದಾಖಲಿಸಿ ಉತ್ತರ ಮಲಬಾರ್‌ನ ಮೊದಲ ಸಂಪೂರ್ಣ ಪೀಡಿಯಾಟ್ರಿಕ್ ಎಮರ್ಜೆನ್ಸಿ ಮೆಡಿಸಿನ್ ವಿಭಾಗ, ಶಾಲಾ ಮಕ್ಕಳಿಗಾಗಿ ರೂಪು ನೀಡಿದ ನೂತನ ಆರೋಗ್ಯ ಯೋಜನೆಯಾದ ‘ಕುಟ್ಟಿ ಡಾಕ್ಟರ್’ ಕಣ್ಣೂರು ಬೇಬಿ ಮೆಮೋರಿ ಯಲ್ ಆಸ್ಪತ್ರೆಯಲ್ಲಿ ಕಾರ್ಯಾರಂಭU ಂಡಿದೆ. ಮಕ್ಕಳ ಜೀವ ಉಳಿಸುವುದಕ್ಕೆ ತುರ್ತು ಹಂತಗಳಲ್ಲಿ ಪ್ರತ್ಯೇಕ ಆರೈಕೆ ಲಭ್ಯಗೊಳಿಸುವುದು ಎಂಬ ಉದ್ದೇಶ ದೊಂದಿಗೆ ಎಮರ್ಜೆನ್ಸಿ ವಿಭಾಗದ ಅಧೀನದಲ್ಲಿ ಮಕ್ಕಳಿಗಾಗಿ ಪೀಡಿಯಾ ಟ್ರಿಕ್ ಎಮರ್ಜೆನ್ಸಿ ವಿಭಾಗ ಸಜ್ಜುಗೊಳಿಸಲಾಗಿದೆ.

ಕಾರ್ಡಿಯೋಲಜಿ, ಆರ್ಥೋಪೀ ಡಿಕ್ಸ್, ನೆಪ್ರೋಲಜಿ, ಕ್ರಿಟಿಕಲ್ ಕೇರ್, ಏರ್‌ವೇ ಮೆನೇಜ್‌ಮೆಂಟ್, ಇಂಟರ್‌ವೆನ್ಶನಲ್ ಏರ್ ವೇ ಮೊದಲಾದ ಮಕ್ಕಳಿಗಾಗಿರುವ ಅತ್ಯಾಧುನಿಕ ಸೇವೆಗಳು ಇಲ್ಲಿ ಲಭ್ಯವಿದೆ. ತುರ್ತು ಸನ್ನಿವೇಶಗಳಲ್ಲಿ ನೆರವಾಗಲು ಮಕ್ಕಳನ್ನು ಸಜ್ಜುಗೊಳಿಸುವ ಯೋಜನೆಯಾಗಿದೆ ಕುಟ್ಟಿ ಡಾಕ್ಟರ್. ಶಾಲೆಗಳಲ್ಲಿ ಸಂಭವಿಸುವ ತುರ್ತು ಹಂತಗಳಲ್ಲಿ ಸಮಯೋಚಿತವಾಗಿ ಮಧ್ಯಪ್ರವೇಶ ನಡೆಸಿ ಪ್ರಥಮ ಶುಶ್ರೂಷೆ ನೀಡಲು ವಿದ್ಯಾರ್ಥಿಗಳನ್ನು ಪ್ರಾಪ್ತರನ್ನಾಗಿ ಮಾಡುವ ಸಾಮಾಜಿಕ ಉದ್ಯಮವಾಗಿದೆ ಇದು. ಕಣ್ಣೂರು ಜಿಲ್ಲೆಯ ಶಾಲೆಗಳಿಂದ ಸ್ಟುಡೆಂಟ್ ಪೊಲೀಸ್ ಕೆಡೆಟ್ ಸದಸ್ಯರಾದ ತಲಾ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ವೈಜ್ಞಾನಿಕವಾದ ತುರ್ತು ಶುಶ್ರೂಷೆ ತರಬೇತಿಯನ್ನು ಬಿಎಂಎಚ್ ತಂಡ ನೀಡಲಿದೆ. ಈ ತರಬೇತಿ ಲಭಿಸಿದ ಮಕ್ಕಳು ಶಾಲೆಗಳಲ್ಲಿ ಕುಟ್ಟಿ ಡಾಕ್ಟರ್‌ಗಳಾಗಿ ಕಾರ್ಯಾಚರಿಸುವರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಯಂಗ್ ಇನ್ಸ್‌ಪಿರೇಶನ್ ಮಾಸ್ಟರ್  ಕೆವಿನ್, ಬೇಬಿ ಹಾಸ್ಪಿಟಲ್‌ನ ಕಣ್ಣೂರು ಕ್ಲಸ್ಟರ್ ಸಿಇಒ ನಿರೂಪ್ ಮುಂಡೆಯಾಡನ್, ಜೆಸ ಖಾಲಿದ್, ಆಯ್ದ ಮಕ್ಕಳು, ಡಾಕ್ಟರ್‌ಗಳು ಎಂಬಿವರು ಸೇರಿ ಉದ್ಘಾಟನೆ ನಿರ್ವಹಿಸಿದರು. ಡಾ| ಮುಹಮ್ಮದ್ ಅಬ್ದುಲ್ ನಾಸರ್ ಸ್ವಾಗತಿಸಿದರು, ಡಾ| ಕಣ್ಣನ್ ಎ.ಎಸ್, ಡಾ| ಪ್ರಸಾದ್ ಕುಮಾರ್, ಡಾ| ನಿತಿನ್ ಅಕ್ಕಲ್ ಮಾತನಾಡಿದರು.

You cannot copy contents of this page