ಜನರು ತಿರಸ್ಕರಿಸಿದ ನಿರಾಶೆಯಿಂದ ಎಸ್‌ಐಆರ್ ವಿರುದ್ಧ ಪ್ರತಿಭಟನೆ- ಎಂ.ಎಲ್. ಅಶ್ವಿನಿ

ಕಾಸರಗೋಡು: ಜನರು ಪೂರ್ಣ ವಾಗಿ ತಿರಸ್ಕರಿಸಿದ ನಿರಾಶೆಯಾಗಿದೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಒಳಗೊಂಡ ಇಂಡಿಯ ಒಕ್ಕೂಟಕ್ಕಿರು ವುದು. ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ನಡೆಸುವ ಪ್ರತಿಭಟನೆ ಇದರಿಂದಾಗಿ ಉದ್ಭವಿಸಿರುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಬಿಜೆಪಿ ಕಾಸರಗೋಡು ಮಂಡಲ ಸಮಿತಿ ಆಯೋಜಿಸಿದ ಶಾಸಕ ಕಲ್ಲಟ್ರ ಮಾಹಿನ್‌ರ ಕಚೇರಿ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಮಯದಲ್ಲಿ ಎಂಟು ಬಾರಿ ಪ್ರತ್ಯೇಕ ವೋಟರ್ ಯಾದಿ ಪರಿಷ್ಕರಣೆ ಜ್ಯಾರಿಗೊಳಿಸಲಾಗಿದೆ. ೧೩.೩ ಕೋಟಿ ನಾಗರಿಕರಿಗೆ ಮತದಾನದ ಹಕ್ಕು ನಷ್ಟಗೊಂಡಿದೆ ಎಂಬ ಪ್ರಚಾರ ನಕಲಿಯಾಗಿದೆ ಎಂದು ಚುನಾವಣಾ ಆಯೋಗದ ಲೆಕ್ಕಗಳಿಂದ ಸ್ಪಷ್ಟವಾಗಿದೆ ಎಂದು ಅವರು ನುಡಿದರು.

ಭ್ರಷ್ಟಾಚಾರ ಪ್ರಕರಣದಲ್ಲಿ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ ಸಲ್ಲಿಸಿದ ಪುರಾವೆಗಳ ಆಧಾರದಲ್ಲಿ ಕೊನೆಗೂ ರಾಜ್ಯ ವಿಜಿಲೆನ್ಸ್ ಕೇಸು ನೋಂದಾಯಿಸಬೇಕಾಗಿ ಬಂತೆಂದು ಅಶ್ವಿನಿ ಅಭಿಪ್ರಾಯಪಟ್ಟರು. ಭ್ರಷ್ಟಾಚಾರ ಪ್ರಕರಣದಲ್ಲಿ ಪ್ರಥಮ ಆರೋಪಿಯಾದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ಮುಖ್ಯಮಂತ್ರಿ ವಿ.ಡಿ. ಸತೀಶನ್ ಹಾಗೂ ಇತರ ಸಚಿವರು, ಶಾಸಕರು ಪ್ರಧಾನ ಚುನಾವಣಾ ಆಯುಕ್ತರ ವಿರುದ್ಧ ಹೋರಾಟಕ್ಕಿಳಿದಿರುವುದು ವಿಪರ್ಯಾಸವೆಂದು ಅವರು ಅಪಹಾಸ್ಯ ಮಾಡಿದರು. ೧೫೦ ದಿನ ಪೂರ್ತಿಯಾಗುವಾಗಲೇ ವಿ.ಡಿ. ಸತೀಶನ್ ಸರಕಾರ ಸಂಪೂರ್ಣ ಪರಾಜಯಗೊಂಡಿದೆ ಎಂದು ಜನರು ಅಭಿಪ್ರಾಯಪಡುತ್ತಿದ್ದು, ಎಡರಂಗ- ಯುಡಿಎಫ್ ಒಕ್ಕೂಟಗಳು ಕೇರಳದ ಹೊರಗೆ ಮಾತ್ರವಲ್ಲ, ಕೇರಳದೊಳಗೂ ಹೊಂದಾಣಿಕೆಯ ಸೂಚನೆಗಳು ಕಂಡು ಬರುತ್ತಿದೆ ಎಂದು ಅವರು ನುಡಿದರು.

ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಪಿ.ಆರ್. ಸುನಿಲ್, ಪಿ. ರಮೇಶ್, ಸುಕುಮಾರ ಕುದ್ರೆಪ್ಪಾಡಿ, ಸುಜ್ಞಾನಿ ಶ್ಯಾನುಭೋಗ್, ರವೀಂದ್ರ ರೈ, ದಿವ್ಯಾ ಸಂದೀಪ್, ಹರೀಶ್ ಕೆ.ಆರ್, ಅನಿತಾ ಆರ್. ನಾಯ್ಕ್, ಟಿ.ವಿ. ಮುರಳಿ, ರಾಮ್‌ಮೋಹನ್, ನಗರಸಭೆ ಹಾಗೂ ಮಧೂರು, ಮೊಗ್ರಾಲ್ ಪುತ್ತೂರು ಪಂಚಾಯತ್‌ಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದರು.

RELATED NEWS

You cannot copy contents of this page