ಎಸ್‌ಐಆರ್: ಶಾಸಕರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯಿಂದ ಮೆರವಣಿಗೆ

ಕಾಸರಗೋಡು: ಕೇಂದ್ರ ಚುನಾವಣಾ ಆಯೋಗ ಜ್ಯಾರಿಗೊಳಿಸಿದ ಎಸ್‌ಐಆರ್‌ನಲ್ಲಿ ಲೋಪವುಂಟಾಗಿದೆ ಯೆಂದು  ಯುಡಿಎಫ್ ಹಾಗೂ ಎಲ್‌ಡಿಎಫ್ ಆರೋಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ  ಎಸ್‌ಐಆರ್ ಜ್ಯಾರಿಗೊಳಿಸಿದ ಬಳಿಕ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕೇರಳದ ಮುಖ್ಯಮಂತ್ರಿ ವಿ.ಡಿ.ಸತೀಶನ್ ಹಾಗೂ ಜಿಲ್ಲೆಯ ಶಾಸಕರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ  ಬಿಜೆಪಿ  ಪ್ರತಿಭಟನೆಗೆ ಚಾಲನೆ ನೀಡಿದೆ. ಇದರ ಮೊದಲ ಹಂತವಾಗಿ ಕಾಸರಗೋಡು ಶಾಸಕ ಕಲ್ಲಟ್ರ ಮಾಹಿನ್‌ರ  ಕಚೇರಿಗೆ ಇಂದು ಬೆಳಿಗ್ಗೆ ಮಾರ್ಚ್ ನಡೆಸಲಾಯಿತು. ಕರಂದಕ್ಕಾಡ್‌ನಲ್ಲಿರುವ ಬಿಜೆಪಿ  ಕಚೇರಿ ಪರಿಸರದಿಂದ  ಮಾರ್ಚ್ ಆರಂಭಗೊಂಡಿತು. ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಉದ್ಘಾಟಿಸಿದರು. ನೇತಾರರ ಸಹಿತ ಹಲವರು ಕಾರ್ಯಕರ್ತರು ಭಾಗವಹಿಸಿದರು.

RELATED NEWS

You cannot copy contents of this page