ಬದಿಯಡ್ಕ: ಬದಿಯಡ್ಕ ಶ್ರೀ ಅಯ್ಯಪ್ಪ ಮಂದಿರದ ಪುನರ್ ಪ್ರತಿಷ್ಠಾ ಕಲಶೋತ್ಸವ ಹಾಗೂ ದೀಪೋತ್ಸವದ ಆಮಂತ್ರಣ ಪತ್ರಿಕೆಯನ್ನು ಹಿರಿಯ ಉದ್ಯಮಿ ವಸಂತ ಪೈ ಬಿಡುಗಡೆಗೊಳಿಸಿದರು. ಉದ್ಯಮಿ ಮದುಸೂಧನ ಆಯರ್ ಅಧ್ಯಕ್ಷತೆ ವಹಿಸಿದರು. ಹಿರಿಯ ಗುರುಸ್ವಾಮಿ ಬಾಲಕೃಷ್ಣ ಮಣಿಯಾಣಿ, ನಿತ್ಯಾನಂದ ಶೇಣಿ, ಡಾ. ಶ್ರೀನಿಧಿ ಸರಳಾಯ, ಗಣೇಶ್ ಭಟ್ ಅಳಕೆ, ದೇವದಾಸ್ ಕಾಮತ್ ಉಪಸ್ಥಿತರಿದ್ದರು. ಅಯ್ಯಪ್ಪ ಸ್ವಾಮಿ ಟ್ರಸ್ಟ್ ಅಧ್ಯಕ್ಷ ನರೇಂದ್ರ ಬಿ. ಸ್ವಾಗತಿಸಿ, ಕಾರ್ಯದರ್ಶಿ ರಾಜೇಶ್ ಮಾಸ್ತರ್ ಚಂಬಲ್ತಿಮಾರ್ ವಂದಿಸಿದರು. ಕೋಶಾಧಿಕಾರಿ ಗುರುಪ್ರಸಾದ್ ರೈ ನಿರೂಪಿಸಿದರು. ಪ್ರತಿಷ್ಠಾ ಕಲಶೋತ್ಸವ ಹಾಗೂ ಅಯ್ಯಪ್ಪ ದೀಪೋತ್ಸವ ಡಿಸೆಂಬರ್ 4ರಿಂದ 6ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.







