ನವರಾತ್ರಿ ಪ್ರಯುಕ್ತ ಬದಿಯಡ್ಕದಲ್ಲಿ ಸಿಂಹ ವೇಷ ಪ್ರದರ್ಶನಕ್ಕೆ ಚಾಲನೆ

ಬದಿಯಡ್ಕ: ನವರಾತ್ರಿ ಹಬ್ಬದಂಗವಾಗಿ ಜನಪದ ಕಲಾವಿದ ವಸಂತ ಬಾರಡ್ಕರ ನೇತೃತ್ವದಲ್ಲಿ ಸಿಂಹ ವೇಷ ಬದಿಯಡ್ಕ ತುಳುಭವನದಿಂದ ಹೊರಟಿತು.ಈ ವೇಳೆ ತಾಸೆ ಬಾರಿಸಿ ಚಾಲನೆ ನೀಡಿದ ಲಕ್ಷ್ಮಣ ಪ್ರಭು ಕರಿಂಬಿಲ ಮಾತನಾಡಿ, ಇಂತಹ ಕಲಾ ಪ್ರದರ್ಶನಗಳು ನಾಡಿನ ಸಾಂಸ್ಕೃತಿಕ ಪರಂಪರೆಯಲ್ಲಿ ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ ಎಂದು ನುಡಿದರು.

ನಿವೃತ್ತ ಮುಖ್ಯೋಪಾಧ್ಯಾಯ ಈಶ್ವರ ಮಾಸ್ತರ್ ಪೆರ್ಮುಖ, ಉದಯಕುಮಾರ್ ಅರ್ತಿಪಳ್ಳ, ಅನಂತಕುಮಾರ್ ಬರ್ಲ, ಹರೀಶ್ ಗೋಸಾಡ ಸಹಿತ ಹಲವರು ಉಪಸ್ಥಿತರಿದ್ದರು.

RELATED NEWS

You cannot copy contents of this page