ಸಿಪಿಎಂ ವಿಸ್ತೃತ ಜಿಲ್ಲಾ ಸಮಿತಿ ಸಭೆ  ನಾಳೆಯಿಂದ: 16ರಂದು ರ‍್ಯಾಲಿ

ಕಾಸರಗೋಡು: ಸಿಪಿಎಂನ ವಿಸ್ತೃತ ಜಿಲ್ಲಾ ಸಮಿತಿ ಸಭೆ ನಾಳೆ ಮತ್ತು 16ರಂದು ವಿದ್ಯಾನಗರದಲ್ಲಿರುವ ಎಕೆಜಿ ಮಂದಿರದಲ್ಲಿ ನಡೆಯಲಿದೆ. ಇದರಲ್ಲಿ ಆಯ್ದ ೧೧೨ ಪ್ರತಿನಿಧಿಗಳು ಭಾಗವಹಿಸುವರು. ನಾಳೆ ಬೆಳಿಗ್ಗೆ 9.3೦ಕ್ಕೆ ಸಿಪಿಎಂನ ಮಾಜಿ ಕೇಂದ್ರ ಸಮಿತಿ ಸದಸ್ಯ ಪಿ. ಕರುಣಾಕರನ್ ಧ್ವಜಾರೋಹಣಗೈಯ್ಯುವ ಮೂಲಕ ಸಭೆ ಆರಂಭಗೊಳ್ಳಲಿದೆ.

ಸಿಪಿಎಂ ಪೋಲಿಟ್ ಬ್ಯೂರೋ ಸದಸ್ಯ ಎ. ವಿಜಯ ರಾಘವನ್ ಉದ್ಘಾಟಿಸುವರು. ಜಿಲ್ಲಾ ಕಾರ್ಯದರ್ಶಿ ಎಂ. ರಾಜಗೋಪಾಲನ್ ವರದಿ ಮಂಡಿಸುವರು. ನಂತರ ಚರ್ಚೆ ಆರಂಭಗೊಳ್ಳಲಿದೆ. ೧೬ರಂದು ಚರ್ಚೆ ಮುಂದುವರಿಯಲಿದ್ದು,  ಬಳಿಕ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಹೊಸ ಕಾರ್ಯಯೋಜನೆಗಳಿಗೆ ರೂಪು ನೀಡಲಾಗುವುದು. ಸಂಜೆ 4 ಗಂಟೆಗೆ ಬೃಹತ್ ರ‍್ಯಾಲಿ ನಡೆಯಲಿದೆ. ವಿದ್ಯಾನಗರದ ಸರಕಾರಿ ಕಾಲೇಜು ಸಮೀಪದ ಎ.ಎಸ್. ಅಚ್ಯುತಾನಂದನ್ ನಗರದ ತನಕ ರ‍್ಯಾಲಿ ನಡೆಯಲಿದೆ. ಇದರಲ್ಲಿ 15೦೦೦ ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ನಂತರ ನಡೆಯಲಿರುವ ಬಹಿರಂಗ ಸಭೆಯಲ್ಲಿ ಸಿಪಿಎಂ ಕೇಂದ್ರ ಸದಸ್ಯರುಗಳಾದ ಡಾ.ಥೋಮಸ್ ಐಸಾಕ್, ರಾಜೀವ್ ಪಿ, ಪಿ. ಸೀತಾದೇವಿ, ರಾಜ್ಯಸಭಾ ಸದಸ್ಯ ಜೋನ್ ಬ್ರಿಟ್ಟೊಸ್, ಸೆಕ್ರೆಟರಿಯೇಟ್ ಸದಸ್ಯರುಗಳಾದ ಪಿ. ಕೆ. ಬಿಜು, ಎಂ.ವಿ. ಜಯರಾಜನ್, ಸಜಿ ಚೆರಿಯಾನ್, ವಿ.ಎನ್. ವಾಸನ್, ಪಿ. ಜಯರಾಜನ್ ಮೊದಲಾದವರು ಈ ಎರಡು ದಿನಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆಂದು ಈ ಸಂಬಂಧ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ. ರಾಜಗೋಪಾಲ್, ಎಡರಂಗ ಜಿಲ್ಲಾ ಸಂಚಾಲಕ ಕೆ.ಪಿ. ಸತೀಶ್ಚಂದ್ರನ್, ಮಾಜಿ ಶಾಸಕ ಸಿ.ಎಚ್. ಕುಂಞಂಬು ಮತ್ತು ಟಿ.ಎಂ.ಎ ಕರೀಂ  ತಿಳಿಸಿದ್ದಾರೆ.

RELATED NEWS

You cannot copy contents of this page