ಮೈಸೂರು ದಸರಾ ಕವಿಗೋಷ್ಠಿಗೆ  ಪ್ರಣಮ್ಯ ಕೆ.ಎಸ್ ಆಯ್ಕೆ

ಕಾಸರಗೋಡು: ಮೈಸೂರು ದಸರಾ ಬಹುರೂಪಿ ಕವಿಗೋಷ್ಠಿ-2026ರ ಚಿಗುರು ಕವಿಗೋಷ್ಠಿಗೆ ಮೊಗ್ರಾಲ್ ಪುತ್ತೂರು  ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ೭ನೇ ತರಗತಿ ವಿದ್ಯಾರ್ಥಿನಿ ಪ್ರಣಮ್ಯ ಕೆ.ಎಸ್‌ಳ ಕವನ ಆಯ್ಕೆಗೊಂಡಿದೆ.  ನಾಳೆ ಮೈಸೂರಿನ ಬಿಎಂಶ್ರೀ ಸಭಾಂಗಣ, ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿಯಲ್ಲಿ ಅಗ್ರಹಾರ ಕೃಷ್ಣಮೂರ್ತಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಚಿಗುರು ಕವಿಗೋಷ್ಠಿಯಲ್ಲಿ  ಪ್ರಣಮ್ಯ ಕವನ ವಾಚನ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದಾಳೆ.  ಇತ್ತೀಚೆಗೆ ಕಾಞಂಗಾಡ್ ಜಿಎಚ್‌ಎಸ್‌ಎಸ್ ಬಲ್ಲ ಈಸ್ಟ್ ಶಾಲೆಯಲ್ಲಿ ಜರಗಿದ ಜಿಲ್ಲಾ ಮಟ್ಟದ ೩೨ ಕಿಲೋಗಿಂತ ಕೆಳಗಿನವರ ಕರಾಟೆ ಸ್ಪರ್ಧೆಯಲ್ಲಿ ಈಕೆ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಳು. ಈಕೆ ಮಾಯಿಪ್ಪಾಡಿಯ ಪ್ರಸಾದ್ ಕೆ.ಎಸ್-ಡಾ. ಸೌಮ್ಯ ದಂಪತಿಯ ಪುತ್ರಿಯಾಗಿದ್ದಾಳೆ.
 

RELATED NEWS

You cannot copy contents of this page