ವೃದ್ದೆಯ ಕುತ್ತಿಗೆಗೆ ಸೀರೆ ಸುತ್ತಿ ಉಸಿರುಗಟ್ಟಿಸಿ ಕೊಲೆ : 16 ಪವನ್ ಚಿನ್ನಾಭರಣ ಲಪಟಾವಣೆ

ತೃಶೂರು: ಇರಿಂಙಾಲಕುಡ ಕಾರಳ ಎಂಬಲ್ಲಿ ವೃದ್ದೆಯನ್ನು ಅತೀ ಕ್ರೂರವಾಗಿ ಕೊಲೆಗೈದು 16 ಪವನ್ ಚಿನ್ನಾಭರಣಗಳನ್ನು ಅಪಹರಿಸಲಾಗಿದೆ. ಕಾರಳಂ ಮೃಗಾಸ್ಪತ್ರೆ ಸಮೀಪ ನಿವಾಸಿ ಅರಿಚ್ಚುಪಳ್ಳಿ ವಿಜಯನ್‌ರ ಪತ್ನಿ ಸಾವಿತ್ರಿ (79) ಕೊಲೆಗೀಡಾದ ವೃದ್ದೆ. ನಿನ್ನೆ ಸಂಜೆ ಮೂರೂವರೆಯಿಂದ ನಾಲ್ಕೂವರೆಯ ಮಧ್ಯೆಗಿನ ಸಮಯದಲ್ಲಿ ಈ ಕೊಲೆ ಕೃತ್ಯ ನಡೆದಿದೆ. ಮನೆಯೊಳಗೆ ಅತಿಕ್ರಮಿಸಿದ ಅಕ್ರಮಿಗಳು ಸಾವಿತ್ರಿಯ ಕುತ್ತಿಗೆ ಹಿಸುಕಿ, ಸೀರೆ ಯಿಂದ ಉಸಿರುಗಟ್ಟಿಸಿ ಕೊಲೆ ಗೈದಿರುವುದಾಗಿ ತಿಳಿಯಲಾಗಿದೆ.

ಈ ವೇಳೆ ತಪ್ಪಿಸುವುದಕ್ಕಾಗಿ ನಡೆಸಿದ ಯತ್ನದ ಗುರುತುಗಳು,  ಸಾಕ್ಷಿ ನಾಶಪಡಿಸಲು ಮನೆಯೊಳಗೆ ಮೆಣಸಿನ ಹುಡಿ ಹಾಕಿರುವುದು ಕಂಡು ಬಂದಿದೆ. ಸಾವಿತ್ರಿ ಧರಿಸಿದ್ದ ಸರ, ೫ ಬಳೆಗಳು, ಉಂಗುರ, ಬೆಂಡೋಲೆ ಸಹಿತ ಚಿನ್ನಾಭರಣಗಳನ್ನು ಅಪಹರಿಸಲಾಗಿದೆ. ಸಾವಿತ್ರಿಯ   ಪುತ್ರ ಹಾಗೂ ಸೊಸೆ ಪತಿ ವಿಜಯನ್‌ರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ವೇಳೆ ಸಾವಿತ್ರಿ ಮಾತ್ರವೇ ಮನೆಯಲ್ಲಿದ್ದರು.  ಕೊಲೆ ಹಾಗೂ ಕಳವಿನಲ್ಲಿ ಅಲೆಮಾರಿ ತಂಡದ ಕೈವಾಡವಿರಬೇಕೆಂದು ಶಂಕಿಸಲಾಗುತ್ತಿದೆ. ಕಾಟೂರು ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದರು.

RELATED NEWS

You cannot copy contents of this page