ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆ ಸಭಾಂಗಣದಲ್ಲಿ ಆಸ್ಪತ್ರೆಯ ಸಿಬ್ಬಂದಿ ಮಂಡಳಿ ಹಾಗೂ ಕನ್ನಡ ಬಳಗ ಜಂಟಿಯಾಗಿ ನಿನ್ನೆ ದಸರಾ ಮಹೋತ್ಸವದಂಗವಾಗಿ ನಾಡಹಬ್ಬ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಆಸ್ಪತ್ರೆಯ ಮೇಲ್ವಿಚಾರಕ ಡಾ| ಜಿತೇಶ್ ವಿ. ಉದ್ಘಾಟಿಸಿದರು. ಲೇ ಸೆಕ್ರೆಟರಿ ಬಾಲಸುಬ್ರಹ್ಮಣ್ಯಂ ಅಧ್ಯಕ್ಷತೆ ವಹಿಸಿದರು. ಡಾ| ಜನಾರ್ದನ್ ನಾಯ್ಕ್ ಮುಖ್ಯ ಭಾಷಣ ಮಾಡಿದರು. ವೈದ್ಯಾಧಿಕಾರಿ ಡಾ| ಸಂಧ್ಯಾ, ಸಿಬ್ಬಂದಿ ಮಂಡಳಿಯ ಅಧ್ಯಕ್ಷ ಡಾ| ಅರುಣ್ ರಾಮ್, ಶುಶ್ರೂಷ ವಿಭಾಗದ ಮುಖ್ಯಸ್ಥೆ ನಿರ್ಮಲಾ ಅಗಸ್ಟಿನ್, ಜೆಪಿಎಚ್ಎನ್ ತರಬೇತಿ ಶಾಲೆಯ ಪ್ರಾಂಶುಪಾಲೆ ಗೀತ ಮೊದಲಾದವರು ಶುಭ ಹಾರೈಸಿದರು. ಆಸ್ಪತ್ರೆಯ ಮೇಲ್ವಿಚಾರಕ ಡಾ| ಜಿತೇಶ್ ವಿ. ಮತ್ತು ಸಿಬ್ಬಂದಿ ಮಂಡಳಿ ಅಧ್ಯಕ್ಷ ಡಾ| ಅರುಣ್ರಾಮ್ರನ್ನು ಈ ಸಂದರ್ಭದಲ್ಲಿ ಪೇಟ ತೊಡಿಸಿ ಅಭಿನಂದಿಸಲಾಯಿತು.
ನರ್ಸಿಂಗ್ ಅಸಿಸ್ಟೆಂಟ್ ನಾರಾಯಣ ಬಾರಡ್ಕ ಸ್ವಾಗತಿಸಿ, ಕಿಶೋರ್ ಕುಮಾರ್ ವಂದಿಸಿದರು. ಆಸ್ಪತ್ರೆಯ ನೌಕರರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಾತ್ರವಲ್ಲ ತುಳುನಾಡಿನ ಸಾಂಪ್ರದಾಯಿಕ ರೀತಿಯ ವಿವಿಧ ಆಹಾರ ಮತ್ತು ಪ್ರಾಚ್ಯ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಯಿತು.







