ಉಳುವಾರು ಮಖಾಂ ಉರೂಸ್: 313 ಮಂದಿ ಒಳಗೊಂಡ ಸ್ವಾಗತ ಸಮಿತಿ ರೂಪೀಕರಣ

ಕುಂಬಳೆ: ಉಳುವಾರು ಸಯ್ಯಿದ್ ಇಸ್ಮಾಯಿಲ್ ಅಲ್ ಬುಖಾರಿ ತಂಙಳ್‌ರ ಹೆಸರಲ್ಲಿ ನಡೆಸುವ ಉರೂಸ್ ಕಾರ್ಯಕ್ರಮದ ಸ್ವಾಗತ ಸಮಿತಿ ರೂಪೀಕರಿಸಲಾಯಿತು. 313 ಮಂದಿಯನ್ನು ಸೇರಿಸಿ ಸಮಿತಿ ರೂಪೀ ಕರಿಸಿದ ಸಭೆಯನ್ನು ಜಮಾಯತ್ ಖತೀಬ್ ಅಬ್ದುಲ್ ರಶೀದ್ ಸಖಾಫಿ ಉದ್ಘಾಟಿಸಿದರು. ಜಮಾಯತ್ ಅಧ್ಯಕ್ಷ ಮನ್ಸೂರ್ ಗುದರ್ ಅಧ್ಯಕ್ಷತೆ ವಹಿಸಿದರು. ಇದೇ ವೇಳೆ ವಿವಿಧ ಉಪಸಮಿತಿಗಳನ್ನು ರೂಪೀ ಕರಿಸಲಾಗಿದೆ. ಮುಂದಿನ ವರ್ಷ ಎಪ್ರಿಲ್ ೭ರಿಂದ ೧೭ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಕುಟುಂಬ ಸಂಗಮ, ಧಾರ್ಮಿಕ ಪ್ರವಚನ, ವಿವಿಧ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿದೆ. ಉಳುವಾರು ಹಿದಾಯತ್ ಇಸ್ಲಾಂ ಮದ್ರಸ ಸಮಿತಿ ಸಭಾಂಗಣದಲ್ಲಿ ನಿನ್ನೆ ಸಮಿತಿ ರೂಪೀಕರಣ ಸಭೆ ಜರಗಿತು.

RELATED NEWS

You cannot copy contents of this page