ಬಂಗ್ರಮಂಜೇಶ್ವರ ರಸ್ತೆ ತಿರುವಲ್ಲಿ ವಿದ್ಯುತ್ ಕಂಬಕ್ಕೆ ಅಳವಡಿಸಿದ ಆಧಾರತಂತಿಯಿಂದ ಅಪಘಾತ ಆತಂಕ

ಮಂಜೇಶ್ವರ: ಹೊಸಂಗಡಿ ಬಳಿಯ ಬಂಗ್ರಮAಜೇಶ್ವರ ರಸ್ತೆಯ ತಿರುವೊಂದರಲ್ಲಿ ವಿದ್ಯುತ್ ಕಂಬಕ್ಕೆ ಅಳವಡಿಸಿದ ಆಧಾರ ತಂತಿ ವಾಹನ ಸವಾರರಿಗೆ ಆತಂಕವನ್ನುAಟುಮಾಡುತ್ತಿದೆ. ಈ ತಂತಿಯನ್ನು ರಸ್ತೆ ಬದಿಯಲ್ಲಿ ಅಳವಡಿಸಲಾಗಿದ್ದು, ಹೊಸಂಗಡಿ ಭಾಗಕ್ಕೆ ಬರುವ ವಾಹನ ಸವಾರರ ಗಮನಕ್ಕೆ ಬಾರದೆ ಎದುರಿನಿಂದ ಬರುವ ವಾಹನಕ್ಕೆ ಸೈಡು ನೀಡುವ ವೇಳೆ ತಂತಿಗೆ ಬಡಿದು ಅಪಘಾತ ಉಂಟಾಗುವ ಭೀತಿ ಕಾಡುತ್ತಿದೆ. ಬಂಗ್ರ ಮಂಜೇಶ್ವರ ದಾರಿಯಾಗಿ ಕಟ್ಟೆ ಬಜಾರ್, ಹೊಸಬೆಟ್ಟು, ತಲಪಾಡಿ ಮೊದಲಾದ ಭಾಗಗಳಿಂದ ಹೊಸಂಗಡಿ ಪೇಟೆಗೆ ದಿನನಿತ್ಯ ನೂರಾರು ವಾಹನಗಳು ಸಂಚಾರ ನಡೆಸುತ್ತಿವೆ. ಅಪಘಾತ ಸಂಭವಿಸುವ ಮುನ್ನವೇ ಸಂಬAಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳು ಈ ತಂತಿಯನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

You cannot copy contents of this page