ಒಂದು ತಿಂಗಳ ಹಿಂದೆ ಊರಿಗೆ ತಲುಪಿದ ಪತ್ನಿ, ಅತ್ತೆಯನ್ನು ಕಡಿದು ಕೊಲೆ

ಇಡುಕ್ಕಿ: ಕುಟುಂಬ ಕಲಹದ ಹಿನ್ನೆಲೆಯಲ್ಲಿ ಯುವಕ ಪತ್ನಿಯನ್ನು ಹಾಗೂ ಪತಿಯ ತಾಯಿಯನ್ನು ಕಡಿದು ಕೊಲೆಗೈದ ಘಟನೆ ನಡೆದಿದೆ. ಗ್ಲೆನ್ ಮೇರಿ ಎಸ್ಟೇಟ್‌ನಲ್ಲಿ ಊರನ್ನೇ ನಡುಗಿಸಿದ ಅವಳಿ ಕೊಲೆ ನಡೆದಿದೆ. ಪ್ರಿಯಾಂಕ (30), ತಾಯಿ ನೇಶಂ (62) ಎಂಬಿವರು ಕೊಲೆಗೀಡಾದವರು. ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಪ್ರಿಯಾಂಕಳ ತಂದೆ ಇಸ್ರಯೇಲ್‌ನನ್ನು ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಪ್ರಿಯಾಂಕಳ ಪತಿ ಪ್ರಿನ್ಸ್‌ನನ್ನು ಪೊಲೀಸರು ಬಂಧಿಸಿದ್ದಾರೆ. ವಿದೇಶದಲ್ಲಿ ಉದ್ಯೋಗದಲ್ಲಿರುವ ಪ್ರಿಯಾಂಕ ಒಂದು ತಿಂಗಳ ಹಿಂದೆ ಊರಿಗೆ ಆಗಮಿಸಿದ್ದರು.

ನಿನ್ನೆ ರಾತ್ರಿ ಮದ್ಯದ ಅಮಲಿನಲ್ಲಿದ್ದ ಪ್ರಿನ್ಸ್ ಪತ್ನಿ ಹಾಗೂ ಅತ್ತೆಯನ್ನು ಕಡಿದು ಕೊಲೆಗೈದಿದ್ದಾನೆ. ತಡೆಯಲು ಯತ್ನಿಸಿದಾಗ ಮಾವನಿಗೂ ಗಾಯ ಉಂಟಾಗಿದೆ. ಕುಟುಂಬ ಕಲಹವೇ ಅವಳಿ ಕೊಲೆಗೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪೀರುಮೇಡ್ ತಾಲೂಕು ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.

You cannot copy contents of this page