ಯುವತಿಗೆ ಹಲ್ಲೆಗೈದು ಕೊಲೆಗೆ ಯತ್ನ: ಪತಿಯ ಬಂಧನ

ಕುಂಬಳೆ: ಯುವತಿಯ ಮೇಲೆ ಹಲ್ಲೆ ನಡೆಸಿದ ಆರೋಪದಂತೆ  ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ನಿವಾಸಿಯಾದ ಮುಹಮ್ಮದ್ ಆಸಿಫ್ ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆಂದು ಪೊಲೀಸರು ತಿಳಿಸಿದ್ದಾರೆ.  ಬಂಬ್ರಾಣ ಮೂಸ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಶಮೀಮ ಎಸ್ (32) ನೀಡಿದ ದೂರಿನಂತೆ ಮುಹಮ್ಮದ್ ಆಸಿಫ್ ವಿರುದ್ಧ ಕುಂಬಳೆ ಪೊಲೀಸರು ನರಹತ್ಯಾಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ಅಕ್ಟೋಬರ್ 20ರಂದು ಅಪರಾಹ್ನ  ಮುಹಮ್ಮದ್ ಆಸಿಫ್ ತನ್ನ ಮೇಲೆ ಹಲ್ಲೆ ನಡೆಸಿ ಕುತ್ತಿಗೆ ಹಿಚುಕಿರುವುದಾಗಿ ಶಮೀಮ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದರು.  ತನ್ನ ಮಗಳನ್ನು  ಮೊಹಮ್ಮದ್ ಆಸಿಫ್‌ನ ಜೊತೆ ಕಳುಹಿಸಿಕೊಡಲು ಒಪ್ಪದ ದ್ವೇಷದಿಂದ ತಾನು ದುಡಿಯುತ್ತಿರುವ ಪೆಟ್ರೋಲ್ ಬಂಕ್‌ಗೆ ತಲುಪಿ ಆರೋಪಿ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಶಮೀಮ ದೂರಿದ್ದರು. ಇದರಂತೆ ಕೇಸು ದಾಖಲಿಸಿಕೊಂಡ ಪೊಲೀಸರು ಮೊಹಮ್ಮದ್ ಆಸಿಫ್‌ನನ್ನು ಬಂಧಿಸಿದ್ದಾರೆ. ಬಳಿಕ ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.

You cannot copy contents of this page