ಕಾಸರಗೋಡು: ಕಾಸರಗೋಡು ನಗರಸಭೆ ಚೇರ್‌ಪರ್ಸನ್‌ರ ಕ್ರಮಗಳನ್ನು ವಿರೋಧಿಸಿ ಬಿಜೆಪಿ ಕೌನ್ಸಿಲರ್‌ಗಳು ಇಂದು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ನಗರಸಭಾ ಚೇರ್‌ಪರ್ಸನ್‌ರ ಛೇಂಬರ್‌ನ ಮುಂಭಾಗ ನಡೆಯುತ್ತಿರುವ ಸತ್ಯಾಗ್ರಹದಲ್ಲಿ ಬಿಜೆಪಿ ಕೌನ್ಸಿಲರ್‌ಗಳಾದ ಗುರುಪ್ರಸಾದ್ ಪ್ರಭು, ಹರೀಶ್ ಕೆ.ಆರ್, ರವೀಂದ್ರ ಪೂಜಾರಿ, ಶ್ರುತಿ ವಿಕಾಸ್, ದಿವ್ಯಾ ಸಂದೀಪ್, ಶಾರದ ಜೆ.ಪಿ.ನಗರ, ಸುಧಾರಾಣಿ, ರಾಜೇಶ್ ಅಮೈ, ಮಧುಕರ, ಅರುಣ್ ಕುಮಾರ್ ಶೆಟ್ಟಿ, ರಾಮಕೃಷ್ಣ ಹೊಳ್ಳ, ರೇಶ್ಮಾ ಆರ್. ಭಾಗವಹಿಸುತ್ತಿದ್ದಾರೆ. ನಗರಸಭೆಯ ಚೆಯರ್ ಪರ್ಸನ್‌ರ ಏಕಾಧಿಪತ್ಯ ಕೊನೆಗೊಳಿಸಬೇಕು, ಕೆಪಿಆರ್‌ರಾವ್ ರಸ್ತೆಯಲ್ಲಿ ಪೇ ಪಾರ್ಕಿಂಗ್ ಮಾಡುವ ತೀರ್ಮಾನವನ್ನು ರದ್ದುಗೊಳಿಸಬೇಕು, ಕಾನೂನುವಿರುದ್ದ ನಿರ್ಧಾರ ಜ್ಯಾರಿಗೊಳಿಸಲೆತ್ನಿಸುವ ಕಾರ್ಯ ದರ್ಶಿಯನ್ನು ಅಮಾನತುಗೈ ಯ್ಯಬೇಕು, ಪ್ರಜಾಪ್ರಭುತ್ವ ರೀತಿಯಲ್ಲಿ ಆಡಳಿತ ನಡೆಸಲು ಸಾಧ್ಯವಾಗದಿದ್ದಲ್ಲಿ ಚೆಯರ್ ಪರ್ಸನ್ ರಾಜೀನಾಮೆ ನೀಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಸತ್ಯಾಗ್ರಹ ನಡೆಯುತ್ತಿದೆ.







