ಮೊಗ್ರಾಲ್ಪುತ್ತೂರು: ಕಾಸರಗೋಡು ಸಿಪಿಎಂನ ಹಿರಿಯ ಮುಖಂಡ ವಿ. ಸುರೇಂದ್ರನ್ (72) ನಿಧನ ಹೊಂದಿದರು. ಮೊಗ್ರಾಲ್ ಪುತ್ತೂರು ಪೆರಿಯಡ್ಕ ನಿವಾಸಿಯಾಗಿದ್ದಾರೆ. ಮೂಲತಃ ಕಣ್ಣೂರು ನಿವಾಸಿಯಾದ ಇವರು ಕಾಸರಗೋಡು ಜಿಲ್ಲಾ ರೂಪೀಕರಣಕ್ಕೂ ಮುಂಚಿತ ಹಾಗೂ ಅದರ ಬಳಿಕ ಹಲವು ವರ್ಷ ಕಾಲ ಸಿಪಿಎಂ ಕಾಸರಗೋಡು ಏರಿಯ ಸಮಿತಿ ಕಚೇರಿ ಕಾರ್ಯದರ್ಶಿಯಾಗಿದ್ದರು. ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅಂದು ಏರಿಯಾ ಕಾರ್ಯದರ್ಶಿ ಆಗಿದ್ದರು. ಜಿಲ್ಲಾ ಸಮಿತಿ ಕಚೇರಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಬಳಿಕ ದಿನೇಶ್ ಬೀಡಿ ಚೌಕಿ ಬ್ರಾಂಚ್ ಮೇಸ್ತ್ರಿಯಾಗಿದ್ದರು. ಸಿಪಿಎಂ ಕಾಸರಗೋಡು ಏರಿಯಾ ಸಮಿತಿ ಸದಸ್ಯ, ಮೊಗ್ರಾಲ್ ಪುತ್ತೂರು ಲೋಕಲ್ ಕಾರ್ಯದರ್ಶಿ, ಬೀಡಿ ಕಾರ್ಮಿಕರ ಯೂನಿಯನ್ ತಾಲೂಕು ಕಾರ್ಯದರ್ಶಿ ಎಂಬೀ ಹುದ್ದೆಗಳನ್ನು ನಿರ್ವಹಿಸಿದ್ದರು.
ಕಾಸರಗೋಡು ಏರಿಯಾ ಸಮಿತಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕಿರಿಸಲಾಯಿತು. ಇವರ ಪತ್ನಿ ಕಮಲಾಕ್ಷಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ವಿಲಾಸಿನಿ, ದಿವ್ಯಾ, ದಿಲ್ನಾ, ಅಳಿಯಂದಿರಾದ ರಮೇಶ್, ಮಹೇಶ್ ಹಾಗೂ ಅಪಾರ ಬಂಧು-ಮಿತ್ರನ್ನು ಅಗಲಿದ್ದಾರೆ. ಓರ್ವ ಅಳಿಯ ದಾಸನ್ ಈ ಹಿಂದೆ ನಿಧನ ಹೊಂದಿದ್ದಾರೆ.






