ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ: 142 ಶಾಲೆಗಳಿಂದಾಗಿ 5೦೦೦ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗಿ

ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಈ ತಿಂಗಳ 5, 11,12,13ರಂದು ಮೀಯಪದವು ಶಾಲೆಯಲ್ಲಿ ನಡೆಯಲಿದೆಯೆಂದು ಸಂಘಟಕ ಸಮಿತಿ ಪದಾಧಿಕಾರಿಗಳು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಎಸ್.ವಿ.ವಿ.ಎಚ್‌ಎಸ್‌ಎಸ್, ವಿಎಯುಪಿಎಸ್ ಮೀಯಪದವು ಎಂಬಿ ವಿದ್ಯಾಲಯಗಳ ಜಂಟಿ ಅತಿಥೇಯತ್ವದಲ್ಲಿ ೬೫ನೇ ಉಪಜಿಲ್ಲಾ ಶಾಲಾ ಕಲೋತ್ಸವ ನಡೆಯಲಿದೆ.

ಉಪಜಿಲ್ಲೆಯ 142 ಶಾಲೆಗಳಿಂದ ೫೦೦೦ದಷ್ಟು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವರು. ೫ರಂದು ವೇದಿಕೇತರ ಸ್ಪರ್ಧೆ, 11ರಿಂದ 13ರ ವರೆಗೆ ವೇದಿಕೆ ಸ್ಪರ್ಧೆಗಳು ನಡೆಯಲಿದೆ. ೫ರಂದು ಬೆಳಿಗ್ಗೆ 9 ಗಂಟೆಗೆ ಎಸ್‌ವಿವಿಎಚ್‌ಎಸ್‌ಎಸ್ ಮೆನೇಜರ್ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಧ್ವಜಾರೋಹಣ ಗೈಯ್ಯುವರು.12ರಂದು ಬೆಳಿಗ್ಗೆ 9.3೦ಕ್ಕೆ ನಡೆಯುವ ಉದ್ಘಾಟನಾ ಕಾರ್ಯ ಕ್ರಮದಲ್ಲಿ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸುವರು. ಮೀಂಜ ಪಂಚಾ ಯತ್ ಅಧ್ಯಕ್ಷ ಸಿ.ಎ. ತಾಜುದ್ದೀನ್ ಅಧ್ಯಕ್ಷತೆ ವಹಿಸುವರು. ಎಯುಒ ನಾರಾಯಣ ದೇಲಂಪಾಡಿ, ಜಿ.ಪಂ. ಸದಸ್ಯ ಹರ್ಷಾದ್ ವರ್ಕಾಡಿ, ಎಂ.ಜಿ. ಬಾಲಸುಬ್ರಹ್ಮಣ್ಯನ್, ಸತೀಶ್‌ಚಂದ್ರ ಎಸ್.ಆರ್, ಸಿ.ಐ ವಿಷ್ಣುಪ್ರಸಾದ್ ಭಾಗವಹಿಸುವರು. ಜೊತೆಗೆ  ಪಂಚಾಯತ್ ಅಧ್ಯಕ್ಷರಾದ ಉಮ್ಮರ್ ಬೋರ್ಕಳ, ಬಷೀರ್ ಕನಿಲ, ಗೋಲ್ಡನ್ ರಹ್‌ಮಾನ್, ವಿ.ಪಿ. ಅಬ್ದುಲ್ ಖಾದರ್ ಉಪಸ್ಥಿತರಿರುವರು. ೧೩ರಂದು ಸಂಜೆ ೩.೩೦ಕ್ಕೆ ಸಮಾರೋಪ ಸಮಾರಂಭವನ್ನು ಜಿ.ಪಂ. ಅಧ್ಯಕ್ಷ ಸಾಬು ಅಬ್ರಹಾಂ ಉದ್ಘಾಟಿಸುವರು. ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲ ತಂಙಳ್ ಅಧ್ಯಕ್ಷತೆ ವಹಿಸುವರು. ಜನಪ್ರತಿನಿಧಿ ಗಳಾದ ಇರ್ಫಾನ್ ಇಕ್ಬಾಲ್ ಕೆ. ಸಹಿತ ವಿವಿಧ ಇಲಾಖಾ ಅಧಿಕಾರಿಗಳು, ಸಾಮಾಜಿಕ, ಸಾಂಸ್ಕೃತಿಕ ರಂಗದ ಹಲವು ಮಂದಿ ಭಾಗವಹಿಸುವರು.  ನಿನ್ನೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಿ.ಎ. ತಾಜುದ್ದೀನ್ ಕಡಂಬಾರ್, ನಾರಾಯಣ ದೇಲಂಪಾಡಿ, ರಮೇಶ್ ಕೆ.ಎನ್., ಮೃದುಲ ಕೆ.ಎಂ., ಅರವಿಂದಾಕ್ಷ ಭಂಡಾರಿ, ಹರೀಶ ಸುಲಾಯ, ಶಿವಸುಬ್ರಹ್ಮಣ್ಯ ಪ್ರಸಾದ್ ಟಿ. ಭಾಗವಹಿಸುವರು.

RELATED NEWS

You cannot copy contents of this page