ಉಪ್ಪಳ: ಜೋಡುಕಲ್ಲು ಗಣೇಶ ಮಂದಿರ ಸಂರಕ್ಷಣೆಗಾಗಿ ಕಳೆದ ಹಲವಾರು ದಿನಗಳಿಂದ ನಿರಂತರ ಭಜನೆ, ಯಾಗ, ಧಾರ್ಮಿಕ ಕಾರ್ಯಕ್ರಮಗಳು, ಯತೀವರ್ಯರ ಭೇಟಿ ಮೊದಲಾದ ಕಾರ್ಯ ಕ್ರಮಗಳು ಮುಂದುವರಿಯುತ್ತಿದೆ. ನಿನ್ನೆ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ ಶಿವಗಿರಿ ಮಠ ಮಡ್ಯಾರು ಮತ್ತು ಶ್ರೀ ಮಹಾಬಲೇಶ್ವರ ಸರಸ್ವತಿ ಶ್ರೀ ಚಾಮುಂಡೇಶ್ವರೀ ಕ್ಷೇತ್ರ ಕಣಿಯೂರು ಕನ್ಯಾನ ಇವರು ಭೇಟಿ ನೀಡಿ ಆಶೀರ್ವಚನ ನೀಡಿದರು. ಸ್ಥಳಕ್ಕೆ ಹಗಲು, ರಾತ್ರಿ ವಿವಿಧೆಡೆಗಳಿಂದ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ. ಇಂದು ರಾತ್ರಿ ೭ರಿಂದ ವಿದುಷಿ ಮಂಜುಳಾ. ಜಿ ರಾವ್ ಇರಾ ಇವರಿಂದ ಶ್ರೀರಾಮ ಭಕ್ತ ಹನುಮ ಹರಿಕಥೆ ಕಾರ್ಯಕ್ರಮ ನಡೆಯಲಿದೆ.







